HomeAnti Corruption Tv59 ಅಲೆಮಾರಿಗಳ ಪ್ರತ್ಯೇಕ ಮೀಸಲಾತಿ ಹಾಗೂ ಹಲವು ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಭಾರಿ ಪ್ರತಿಭಟನೆ

59 ಅಲೆಮಾರಿಗಳ ಪ್ರತ್ಯೇಕ ಮೀಸಲಾತಿ ಹಾಗೂ ಹಲವು ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಭಾರಿ ಪ್ರತಿಭಟನೆ

- Advertisement -spot_img

ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ತಾ. 01-08-2024 ರಂದು ಸುಪ್ರೀಂ ಕೋರ್ಟ್‌ 7 ಜನ ನ್ಯಾಯಾಧೀಶರ ಪೀಠ ಐತಿಹಾಸಿಕ ತೀರ್ಪು ನೀಡಿತು.

ಪರಿಶಿಷ್ಟ ಜಾತಿಗಳಲ್ಲಿ ಹಿಂದುಳಿದಿರುವಿಕೆ ಆಧಾರದಲ್ಲಿ ನಿಖರ ದತ್ತಾಂಶ ಸಂಗ್ರಹಿಸಿ ವರ್ಗೀಕರಣ ಮಾಡಿ ಒಳ ಮೀಸಲಾತಿ ಕಲ್ಪಿಸಲು ಆದೇಶಿಸಿತು. 35 ವರ್ಷಗಳ ಮಾದಿಗ ಮತ್ತು ಮಾದಿಗೆ ಸಂಬಂಧಿತ ಸಮಾಜದ ಹೋರಾಟಕ್ಕೆ ಮಹಾಜಯ ಲಭಿಸಿತು.

ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ಆಯೋಗವು 101 ಪರಿಶಿಷ್ಟ ಜಾತಿಗಳ ಹಿಂದುಳಿದಿರುವಿಕೆಯಲ್ಲಿ ಹಿಂದುಳಿದಿರುವಿಕೆಯನ್ನು ಗುರುತಿಸಿ ಸೂತ್ರ ರೂಪಿಸಿತು. ಆದರೆ ರಾಜ್ಯ ಸಚಿವ ಸಂಪುಟವು ಆಯೋಗದ ಸೂತ್ರವನ್ನು ಮಾರ್ಪಡಿಸಿ ವರ್ಗೀಕರಿಸಿತು. ಆದ್ದರಿಂದ ಅಲೆಮಾರಿ

ಹಾಗೂ ಅರೆ ಅಲೆಮಾರಿ ಜಾತಿಗಳಿಗೆ ಸರ್ಕಾರದ ಈ ಕ್ರಮ “ಮರಣಶಾಸನ’ವಾಗಿ ಪರಿಣಮಿಸಿದೆ.

101 ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿರುವ ಚನ್ನದಾಸ, ಬುಡ್ಗಜಂಗಮ, ಸುಡುಗಾಡುಸಿದ್ದ, ದಕ್ಕಲರು, ಮಾಲದಾಸರು, ಹೊಲಿಯದಾಸರು, ಡಂಬರ್, ಸಿಳ್ಳೆಕ್ಯಾತರು, ಸಿಂಧೂಳು ಮುಂತಾದ 59 ಜಾತಿಗಳು ರಾಜ್ಯ ಸರ್ಕಾರದ ಅಮಾನುಷ ನಡೆಯಿಂದ ಆಘಾತಗೊಂಡು ತೀವ್ರ ಪ್ರತಿಭಟನೆ ನಡೆಸುತ್ತಿದೆ.

ಬಹಳ ಹಿಂದುಳಿದ 59 ಅಲೆಮಾರಿ ಸಣ್ಣ ಜಾತಿಗಳನ್ನು ಅತೀ ಕಡಿಮೆ ಹಿಂದುಳಿದಿರುವ ‘ಸಿ’ ವರ್ಗದ ಸ್ಪಷ್ಟ ಜಾತಿಗಳೊಟ್ಟಿಗೆ ಸೇರಿಸಿರುವುದು ಸುಪ್ರೀಂ ಕೋರ್ಟ್ ತೀರ್ಪಿನ ನಿರ್ದೇಶನದ ಉಲ್ಲಂಘನೆ ಹಾಗೂ ಅಪಮಾನಿಸಿದಂತಾಗಿದೆ. ಅಲ್ಲದೆ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಮೂರು ಜಾತಿಗಳ ಗೊಂದಲವನ್ನು ಸರಿಯಾಗಿ ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. – DR N Murthy

Reported by Srikanth Shivaraj

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here