ಶ್ರೀಮತಿ ಪ್ರೇಮ ಲೀಲಾ ಕಿರಿಯ ಸಹಾಯಕಿ ಬೆಸ್ಕಾಂ ನಗರ ಉಪ ವಿಭಾಗ ದಾವಣಗೆರೆ ಇವರನ್ನು ಅಷಕ್ತತಾ ಆಧಾರದ ಮೇಲೆ ಕವಿಪ್ರನಿನಿ 2015ರ ಆದೇಶವನ್ನು ಉಲ್ಲೇಖಿಸಿ ವೈದ್ಯಕೀಯ ಆಧಾರದ ಮೇಲೆ ನಿವೃತ್ತಿಗೊಳಿಸಿರುತ್ತಾರೆ. ಇವರು 2019ರ ನೇಮಕಾತಿ ಹೊಂದಿರುವುದರಿಂದ ND CPS ನೌಕರರಾಗಿದ್ದು ಇವರಿಗೆ ಸ್ವಯಂ ನವೃತ್ತಿಗೊಳ್ಳುವುದಾಗಲಿ ಅಥವಾ ಅಷಕ್ತತಾ ಮೇಲೆ ನಿವೃತ್ತಿ ಗೊಳಿಸುವುದಾಗಲಿ ಅಥವಾ 2015ರ ಸುತ್ತೋಲೆಯ ಅನ್ವಯ ನಿವೃತ್ತಿ ಉಳಿಸುವುದಾಗಲಿ ಸರ್ಕಾರದಲ್ಲಿ ನಿಯಮಗಳು ಇರುವುದಿಲ್ಲ ಇದನ್ನು ಮರೆಮಾಚಿ
ಶ್ರೀಮತಿ ಪ್ರೇಮ ಲೀಲಾ ರವರ ಮಗನಾದ ವಿನಾಯಕ, ರವರಿಗೆ ಕ ವಿ ಪ್ರನಿನಿ 2021ರ ತಿದ್ದುಪಡಿ ಆದೇಶವನ್ನು ಮರೆಮಾಚಿ ನಕಲಿ ಅನುಕಂಪದ ಆಧಾರದ ಮೇಲೆ ಉದ್ಯೋಗವನ್ನು ನೀಡಿರುವ ಬಗ್ಗೆ ದಾಖಲಾತಿಗಳ ಸಮೇತ ದೂರು ನೀಡಿ ವ್ಯವಸ್ಥಾಪಕ ನಿರ್ದೇಶಕರು ಬೆವಿಕಂ ಬೆಂಗಳೂರು ರವರಿಗೆ ದೂರು ನೀಡಲಾಗಿ ಅದರಂತೆ ವ್ಯವಸ್ಥಾಪಕ ನಿರ್ದೇಶಕರ ಆದೇಶದ ಅನ್ವಯ ಮುಖ್ಯ ಇಂಜಿನಿಯರ್ (ವಿ) ಬೆಸ್ಕಾಂ ಬೆಂಗಳೂರು ಮಹಾನಗರ ಕ್ಷೇತ್ರ ಉತ್ತರ ವಲಯ ಬೆಂಗಳೂರು ರವರು ದೀರ್ಘ ತನಿಕಾ ವರದಿಯನ್ನು ತಯಾರಿಸಿ ಅನುಕಂಪದ ಆಧಾರದ ಮೇಲೆ ನೌಕರಿ ನೀಡಿರುವುದು ಹಾಗೂ ಕವಿಪ್ರನಿನಿ /ಬೆಸ್ಕಾಂ ನಿಯಮಗಳನ್ನು ಗಾಳಿಗೆ ತೂರಿ ನೌಕರಿ ನೀಡಿರುವುದು ಸ್ಪಷ್ಟವಾಗಿ ಹಾಗೂ ದುರುದ್ದೇಶದಿಂದ ನೌಕರಿ ನೀಡಿರುವುದು ಕಂಡು ಬಂದಿರುವುದರಿಂದ ಈ ಪ್ರಕರಣದಲ್ಲಿ ಭಾಗಿಯಾಗಿರುವಂತಹ ಒಟ್ಟು 13 ಅಧಿಕಾರಿ ಮತ್ತು ನೌಕರರನ್ನು ಕೂಡಲೇ ಅಮಾನತ್ತುಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲು ವರದಿಯನ್ನು ದಿನಾಂಕ 10-06-2025 ರಂದು ಸಲ್ಲಿಸಿದ್ದರು ಇದುವರೆಗೂ ಯಾವುದೇ ರೀತಿ ಶಿಸ್ತು ಕ್ರಮ ಕೈಗೊಳ್ಳದೆ ಪ್ರಕರಣವನ್ನು ಪ್ರಧಾನ ವ್ಯವಸ್ಥಾಪಕರು ಆಡಳಿತ ಮತ್ತು ಮಾನವ ಸಂಪನ್ಮೂಲ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಬೆಸ್ಕಾಂ ಬೆಂಗಳೂರು ರವರು ಮುಚ್ಚಿಹಾಕುವ ಯತ್ನದಲ್ಲಿದ್ದಾರೆ. ಆನೇಕ ಬಾರಿ ಶ್ರೀಯುತ ಬಿ.ಎಸ್.ಮಲ್ಲಿಕಾರ್ಜುನ ರೆಡ್ಡಿ ರವರು ಭೇಟಿ ನೀಡಿದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಇಂತಹ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಹಾಗೂ ಭ್ರಷ್ಟತೆಯನ್ನು ಮುಂದುವರಿಸುವ ಅನುಮಾನವಿರುತ್ತದೆ ಇವರ ಬಗ್ಗೆ ಮತ್ತು ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಇಂಧನ ಇಲಾಖೆಯ ಅಪರ ಕಾರ್ಯದರ್ಶಿ ವಿಧಾನಸೌಧ ಬೆಂಗಳೂರು ಮತ್ತು ಘನ ಸರ್ಕಾರದ ಇಂಧನ ಮಂತ್ರಿಗಳಾದ ಶ್ರೀಯುತ ಸನ್ಮಾನ್ಯ ಶ್ರೀ ಕೆಜೆ ಜಾರ್ಜ್ ರವರನ್ನು ಬಿ.ಎಸ್.ಮಲ್ಲಿಕಾರ್ಜುನ ರೆಡ್ಡಿ ರವರು ಮಾಧ್ಯಮದ ಮುಖಾಂತರ ಒತ್ತಾಯಿಸುತ್ತಿದ್ದಾರೆ.
ಇದುವರೆಗೂ ನಕಲಿ ನೌಕರಿ ನೀಡಿರುವ ನೌಕರನನ್ನು ಮುಂದುವರಿಸಿ ಸಂಬಳ ವೇತನವನ್ನು ನೀಡುತ್ತಾ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ. ಇಂತಹದ್ದೇ ಪ್ರಕರಣ ನಕಲಿ ಅನುಕಂಪದ ಆಧಾರದ ಪ್ರಕರಣಗಳು ಬೆಂಗಳೂರು ದಕ್ಷಿಣ ವೃತ್ತ ಬೆಸ್ಕಾಂ ಕಚೇರಿಯಲ್ಲಿ ಈಗಾಗಲೇ ಕಂಡು ಬಂದಿದ್ದು ಸಂಬಂಧಿಸಿದ ಅಧಿಕಾರಿಗಳನ್ನು ದಸ್ತಗಿರಿಗೊಳಿಸಿ ಕರ್ತವ್ಯದಿಂದ ಅಮಾನತ್ತುಗೊಳಿಸಿ ನಕಲಿ ನೌಕರರ ಕರ್ತವ್ಯದಿಂದ ತೆಗೆದುಹಾಕಿರುತ್ತಾರೆ. ಈ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುತ್ತದೆ ಆದರೆ ಇಂತಹದ್ದೇ ಈ ಪ್ರಕರಣವನ್ನು ದಯಾನಂದ್ ರವರು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದು ಕಂಡು ಬಂದಿರುತ್ತದೆ.
ಸನ್ಮಾನ್ಯ ಶ್ರೀ ದಯಾನಂದರವರು ಈ ಹಿಂದೆ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ ವಿಜಯ ಬ್ಯಾಂಕ್ ಆಫೀಸರ್ಸ್ ಕಾಲೋನಿಯ ಖಾತೆಯನ್ನು ಮರಣ ಹೊಂದಿದ ವ್ಯಕ್ತಿಗೆ ಆಕ್ರಮವಾಗಿ 2015 ರಲ್ಲಿ ಖಾತೆ ಬದಲಾವಣೆ ಮಾಡಿಕೊಟ್ಟಿರುವ ಪ್ರಕರಣ ಗಣಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿ, ಲೋಕಾಯುಕ್ತ ಅಧಿಕಾರಿಗಳು ದಯಾನಂದ್ ರವರನ್ನು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಿರುತ್ತಾರೆ. ಹಾಗೂ 2020ರಲ್ಲಿ ಕಂದಾಯ ಇಲಾಖೆ ಬೆಂಗಳೂರು ದಕ್ಷಿಣ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ 6ಎಕರೆ 26 ಗುಂಟೆ ಬಫರ್ ಜೂನ್ ಕರೆಯನ್ನು ಒತ್ತುವರಿ ಮಾಡಿರುವ ಜಾಗಕ್ಕೆ ಬೇರೆಯವರ ಹೆಸರಿಗೆ ಆಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ಬೆಳಕಿಗೆ ಬಂದು ಘನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯವು ದಯಾನಂದ್ ರವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆದೇಶ ನೀಡಿರುವ ಪ್ರಯುಕ್ತ ಸದರಿ ಇಲಾಖೆ ವಿಚಾರಣೆಯು ಇಂದಿಗೂ ವಿಚಾರಣೆಯ ಹಂತದಲ್ಲಿದೆ ಇಂಥ ಭ್ರಷ್ಟ ಅಧಿಕಾರಿಯನ್ನು ಬೆಸ್ಕಾಂನ ಇಲಾಖೆಗೆ ವರ್ಗಾವಣೆಗೊಳಿಸಿರುವುದಲ್ಲದೆ ಜೊತೆಗೆ ಕಂದಾಯ ಇಲಾಖೆಗೆ ನಿಯೋಜನೆ ಮೇಲೆ ಕೆಲಸ ನಿರ್ವಹಿಸಲು ಆದೇಶ ಮಾಡಿರುತ್ತಾರೆ ಇಂತ ಭ್ರಷ ಅಧಿಕಾರಿಗೆ ಎರಡು ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿದೆ ಇಂತ ಭ್ರಷ್ಟ ಅಧಿಕಾರಿಯಿಂದ ನಾವು ದಾಖಲೆಸಿರುವ ಪ್ರಕರಣಕ್ಕೆ ಯಾವ ನ್ಯಾಯವನ್ನು ನಿರೀಕ್ಷಿಸುವುದು ಆದ್ದರಿಂದ ಮಾನ್ಯ ಇಂಧನ ಸಚಿವರು ಈ ಕೂಡಲೇ ಗಮನ ಹರಿಸಿ ಹಾಗೂ ಅಪರ ಕಾರ್ಯದರ್ಶಿ ಕರ್ನಾಟಕ ಸರ್ಕಾರ ಇಂಧನ ಇಲಾಖೆ ವಿಕಾಸ ಸೌಧ ರವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿ ನೌಕರರನ್ನು ಅಮಾನತ್ತುಗೊಳಿಸಿ ಕಾನೂನು ಅಡಿಯಲ್ಲಿ ಶಿಕ್ಷೆಗೆ ಒಳಪಡಿಸುವಂತೆ ಬಿ.ಎಸ್.ಮಲ್ಲಿಕಾರ್ಜುನ ರೆಡ್ಡಿ ರವರು ಒತ್ತಾಯಿಸುತ್ತಿದ್ದಾರೆ
ವರದಿ : ಶ್ರೀಕಾಂತ್ ಶಿವರಾಜ್






