ನಗರದ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಟಿಎಂ ಹಾಗೂ ಮಡಿವಾಳ ವಾರ್ಡ್ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆಗಳಾದ ಎನ್ ಎಸ್ ಪಾಳ್ಯ, ವಿದ್ಯಾ ಜ್ಯೋತಿ ಕನ್ನಡ ಶಾಲೆ, ಬುದ್ಧ ಶಾಲೆ, ತಾವರೆಕೆರೆ, ಉರ್ದು, ಇಂದಿರಾ ಗಾಂಧಿ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯಾರ್ಥಿ ವೇತನ, ನೋಟ್ ಪುಸ್ತಕ, ಬ್ಯಾಗ್ ಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಓದುವ ಕೆಲವು ಬಡ ಮಕ್ಕಳಿಗೆ ಹಣಕಾಸಿನ ಕೊರತೆ ಇರುತ್ತದೆ ಉಳ್ಳವರು ಸಹಾಯ ಮಾಡುವ ಮೂಲಕ ಉನ್ನತ ಮಟ್ಟಕ್ಕೆ ಬೆಳೆಯಲು ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ.

ನೀವು ಮಾಡುವ ಸಹಾಯ ಒಬ್ಬ ವಿದ್ಯಾರ್ಥಿಯ ಬದುಕನ್ನು ಬೆಳಗಲು ಸಹಕಾರಿಯಾಗುತ್ತದೆ ಅವನು ನಿಮ್ಮನ್ನು ಜೀವನದಿದ್ದಕ್ಕೂ ನೆನೆಯುತ್ತಾನೆ ಎಷ್ಟೇ ಗಳಿಸಿದರು ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಬಾಳಲ್ಲಿ ಬೆಳಕಾಗಿ ಎಂದು ಕರೆ ನೀಡಿದರು.

ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಮುಖ್ಯವಾದ ಘಟವಾಗಿದ್ದು ಶ್ರಮಪಟ್ಟು ಓದಿದರೆ ನಿಮ್ಮ ಮುಂದಿನ ಜೀವನವನ್ನು ಯಾವ ರೀತಿ ಬೇಕಾದರೂ ಪರಿವರ್ತಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಪಠ್ಯದ ಜೊತೆಗೆ ಪಠ್ಯೇತರ ತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ನಿಮ್ಮಲ್ಲಿರುವ ಪ್ರತಿಭೆ ಬೆಳಕಿಗೆ ಬಂದಾಗ ಕಲಾತ್ಮಕವಾಗಿ ಕ್ರೀಡಾಪಟುವಾಗಿ ಹಾಡುಗಾರಿಕೆಯಾಗಿ ಯಾವುದೆಲ್ಲಾದರೂ ಬದುಕು ರೂಪಿಸಲು ಸಹಕಾರಿಯಾಗುವುದರಿಂದ ನಿಮ್ಮ ಆಸಕ್ತಿಗ ಅನುಗುಣವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು
ಹಾಲಿ ಮಾಜಿ ಬಿಬಿಎಂಪಿ ಸದಸ್ಯರುಗಳು ಹಾಜರಿದ್ದರು.






