HomeAnti Corruption Tvಸಿಂಗಾಪುರ ಧ್ವಜ ಹೊಂದಿರುವ ಕಂಟೈನರ್ ಹಡಗು ಎಂವಿ ವಾನ್ ಹೈ 503ರಲ್ಲಿ ಸ್ಫೋಟ

ಸಿಂಗಾಪುರ ಧ್ವಜ ಹೊಂದಿರುವ ಕಂಟೈನರ್ ಹಡಗು ಎಂವಿ ವಾನ್ ಹೈ 503ರಲ್ಲಿ ಸ್ಫೋಟ

- Advertisement -spot_img

ಸಿಂಗಾಪುರ ಧ್ವಜ ಹೊಂದಿರುವ ಕಂಟೈನರ್ ಹಡಗು ಎಂವಿ ವಾನ್ ಹೈ 503ರಲ್ಲಿ ಸ್ಫೋಟವೊಂದು ಸಂಭವಿಸಿರುವುದಾಗಿ ರಕ್ಷಣಾ ಪಡೆ PRO ತಿಳಿಸಿದೆ. ಕೇರಳದ ಕರಾವಳಿಯಲ್ಲಿ ಸೋಮವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.

ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಂಟೈನರ್ ಹಡಗಿನಿಂದ 18 ಸಿಬ್ಬಂದಿಯನ್ನು ಭಾರತೀಯ ನೌಕಪಡೆ ಹಾಗೂ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿರುವುದಾಗಿ ತಿಳಿದು ಬಂದಿದೆ.ಬೆಳಗ್ಗೆ 10-30 ರ ಸುಮಾರಿನಲ್ಲಿ ಸ್ಫೋಟದ ಮೊದಲ ವರದಿಯನ್ನು ಮುಂಬೈನ ಕಡಲ ಕಾರ್ಯಾಚರಣೆ ಕೇಂದ್ರ ಕೊಚ್ಚಿಯಲ್ಲಿರುವ ಕಡಲ ಕಾರ್ಯಾಚರಣೆ ಕೇಂದ್ರಕ್ಕೆ ತಿಳಿಸಿದೆ. 270 ಮೀಟರ್ ಉದ್ದದ ಹಡಗು ಜೂನ್ 7 ರಂದು ಕೊಲಂಬೊದಿಂದ ಹೊರಟು ಮುಂಬೈಗೆ ತೆರಳುತ್ತಿತ್ತು, ಜೂನ್ 10 ರಂದು ಆಗಮಿಸುವ ನಿರೀಕ್ಷೆಯಿತ್ತು.

ಸಮುದ್ರ ಮಧ್ಯದಲ್ಲಿ ಎಂವಿ ವಾನ್ ಹೈ 503 ಹಡಗಿನಲ್ಲಿ ಸ್ಫೋಟ ಸಂಭವಿಸಿರುವ ಬಗ್ಗೆ ಜೂನ್ 9 ರಂದು ಬೆಳಗ್ಗೆ 10-30 ರ ಸುಮಾರಿನಲ್ಲಿ ಮುಂಬೈ ಕಡಲ ಕಾರ್ಯಾಚಾರಣೆ ಕೇಂದ್ರದಿಂದ ಮಾಹಿತಿ ಪಡೆಯಲಾಯಿತು. ಸಿಂಗಾಪುರ ಧ್ವಜ ಹೊಂದಿರುವ ಕಂಟೈನರ್ ಹಡಗು ಆಗಿದ್ದು, ಕೊಲೊಂಬೊದಿಂದ ಮುಂಬೈಗೆ ತೆರಳುತಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಭಾರತೀಯ ನೌಕ ಪಡೆ ಕೊಚ್ಚಿಯಲ್ಲಿ ನಿಲ್ಲಿಸಲು ನಿರ್ಧರಿಸಿದ್ದ ಐಎನ್ ಎಸ್ ಸೂರತ್ ನ್ನು ನೆರವಿಗೆ ಕಳುಹಿಸಿದ್ದಾರೆ ಎಂದು ರಕ್ಷಣಾ ಪಡೆ ಪಿಆರ್ಓ ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here