HomeAnti Corruption Tvಮಂಡ್ಯ ಜಿಲ್ಲಾ ಕಾರಾಗೃಹ ಮತ್ತು ಮಿಮ್ಸ್ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ...

ಮಂಡ್ಯ ಜಿಲ್ಲಾ ಕಾರಾಗೃಹ ಮತ್ತು ಮಿಮ್ಸ್ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ದಿಢೀರ್ ಭೇಟಿ: ಆರೋಪಿಗೆ ಪ್ರತ್ಯೇಕ ಚಿಕಿತ್ಸೆ – ಕಾನೂನು ಉಲ್ಲಂಘನೆ ಪತ್ತೆ

- Advertisement -spot_img

https://youtube.com/shorts/QwCaUEhMP0k

ದಿನಾಂಕ: 24-08-2026 ರಂದು ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಸಿ. ಹಾಗೂ ಗೌರವಾನ್ವಿತ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಶಶಿಧರ ಶೆಟ್ಟಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ಬಾಲಸುಬ್ರಮಣಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಡಾ|| ಶ್ರೀ ಮೋಹನ್ ರಾವ್ ನಲ್ವಡೆ ರವರು ಹಾಗೂ ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಆನಂದ್. ಎಂ ರವರು ಸಂಜೆ ಮಿಮ್ಸ್ ಆಸ್ಪತ್ರೆಗೆ ಅನಿರೀಕ್ಷಿತವಾಗಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದಾಗ, ಆರೋಪಿ ಮಹಮದ್ ಹುಸೇನ್ ADLR ಶ್ರೀರಂಗಪಟ್ಟಣ ರವರಿಗೆ ದಿನಾಂಕ: 21.08.2026 ರಿಂದ ಇಲ್ಲಿಯವರೆಗೂ ಪ್ರತ್ಯೇಕ ಕೋಣೆಯಲ್ಲಿ ಅನಧಿಕೃತವಾಗಿ ಚಿಕಿತ್ಸೆ ನೀಡುತ್ತಿರುವುದು ಹಾಗೂ ಸದರಿ ಕೊಠಡಿಯಲ್ಲಿ ಒಬ್ಬ ಮಹಿಳೆ ಸಹ ಇರುವುದು ಕಂಡು ಬಂದಿದ್ದು ಈ ಸಂದರ್ಭದಲ್ಲಿ ಆಸ್ಪತ್ರೆಯ ಅಧೀಕ್ಷಕರಾದ ಶಿವಕುಮಾರ್ ರವರನ್ನು ವಿಚಾರಿಸಿದಾಗ ಮಹಮದ್ ಹುಸೇನ್ ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ ಎಂದು ತಿಳಿಸಿರುತ್ತಾರೆ.

ಸ್ಥಳದಲ್ಲಿ ಹಾಜರಿದ್ದ ಜೈಲು ಸೂಪರಿಡೆಂಟ್ರವರನ್ನು ವಿಚಾರಿಸಿದಾಗ ಸದರಿಯವರು ಜೈಲಿನ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಆರೋಪಿ ಮಹಮ್ಮದ್ ಹುಸೇನ್ ರವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಸಿಲಾಗಿದ್ದು, ಸದರಿ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸಿರುವುದಿಲ್ಲ ಇನ್ನು ಮುಂದೆ ತಿಳಿಸುವುದಾಗಿ ತಿಳಿಸಿರುತ್ತಾರೆ. ಹಾಗೂ ನ್ಯಾಯಾಲಯದ ಅನುಮತಿ ಪಡೆಯದೆ ಅನಧೀಕೃತವಾಗಿ ಆರೋಪಿಯನ್ನು ದಿನಾಂಕ: 21.08.2026 ರಿಂದ ಇಲ್ಲಿಯವರೆಗೂ ದಾಖಲಿಸಿರುವುದು ಸ್ಪಷ್ಟ ಕಾನೂನಿನ ಉಲ್ಲಂಘನೆ ಆಗಿರುವುದು ಹಾಗೂ ಆರೋಪಿಯ ಕೋಣೆಯಲ್ಲಿ ಒಬ್ಬ ಮಹಿಳೆಯು ಸಹ ಇರುವುದು ಕಂಡು ಬಂದಿದ್ದು, ಮೇಲ್ನೋಟಕ್ಕೆ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿರುವುದು ಕಂಡು ಬರುತ್ತದೆ. ಇದರ ಬಗ್ಗೆ ಜೈಲು ಸೂಪರಿಡೆಂಟ್ ಹಾಗೂ ಪೋಲೀಸ್ ಅಧಿಕಾರಿ ಹಾಗೂ ಮಿಮ್ಸ್ ಆಸ್ಪತ್ರೆಯ ಅಧೀಕ್ಷಕರವರಿಗೆ ವರದಿ ನೀಡುವಂತೆ ನಿರ್ದೇಶಿಸಲಾಗಿರುತ್ತದೆ. ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆರೋಪಿಯ ಜೊತೆ ಇದ್ದಂತಹ ಮಹಿಳೆಯನ್ನು ವಿಚಾರಿಸಲಾಗಿ ಆಕೆಯು ಆರೋಪಿಯ ಗೆಳತಿ ತಾನು ಎಂಬುದಾಗಿ ತಿಳಿಸಿರುತ್ತಾರೆ.
ಹಾಗೂ ಇದರೊಂದಿಗೆ ಆರೋಪಿ ಮಹಮದ್ ಹುಸೇನ್ ರವರ ಪ್ರಕರಣದ ಸಂಕ್ಷಿಪ್ತ ಸಾರಾಂಶ ಈ ಕೆಳಗಿನಂತೆ ಇರುತ್ತದೆ.

ದಿನಾಂಕ:02.07.2026 ರಂದು ಮಂಡ್ಯ ಜಿಲ್ಲೆ ಲೋಕಾಯುಕ್ತ ಪೋಲೀಸ್ ಠಾಣೆಯ ಪೋಲೀಸ್ ಇನ್ಸ್ಪೆಕ್ಟರ್ರವರಾದ ಬ್ಯಾಟರಾಯನ್ ಬಿ.ಪಿ ರವರು ಸರ್ಕಾರಿ ಕಛೇರಿ ಶ್ರೀರಂಗಪಟ್ಟಣ ತಾಲ್ಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಗೆ ಅಕ್ರಮ ಪ್ರವೇಶ ಮಾಡಿ, ಸರ್ಕಾರಿ ನೌಕರನೆಂಬ ಸೋಗಿನಲ್ಲಿ ಸಾರ್ವಜನಿಕರಿಗೆ ಸರ್ಕಾರಿ ನೌಕರನೆಂದು ನಂಬಿಸಿ, ನಂಬಿಕೆ ಬರುವಂತೆ ಅನಧೀಕೃತವಾಗಿ ಸರ್ಕಾರಿ ತಂತ್ರಾಂಶದಲ್ಲಿ ಆಕಾರ್ಬಂದ್ ದಾಖಲೆಯನ್ನು ಡಿಜಿಟಲೀಕರಣ ಮಾಡಿರುವ ಮತ್ತು ರೆವಿನ್ಯೂ/ಸರ್ವೆ ಇಲಾಖೆಯ ವ್ಯವಹರಣೆಗೆ ಸಂಬಂಧಪಟ್ಟ ಸರ್ಕಾರಿ ನಕಲಿ ದಾಖಲೆ ಸೃಷ್ಟಿಸಿದ ಸಂಬಂಧ ಇದಕ್ಕೆ ಸಹಕಾರ ನೀಡಿರುವ ಮಹಮದ್ ಹುಸೇನ್ ADLR ಸರ್ವೆ ಸೂಪರ್ ವೈಸರ್ ರವರನ್ನು ದಿನಾಂಕ: 02.07.2026 ರಂದು ದಸ್ತಗಿರಿ ಮಾಡಿ ಮೊಕದ್ದಮೆ ಸಂಖ್ಯೆ 164/26 ಕಲಂ 61(2), 204, 316, (5), 318 (3), 335 , 336(3), 340(2),341 ಕೂಡ 149 ಬಿಎನ್ಎಸ್ ಕಾಯ್ದೆ ರೀತ್ಯಾ ದಾಖಲಿಸಲಾಗಿ ದಿನಾಂಕ 03.07.2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ವಿಧಿಸಿರುತ್ತದೆ.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here