ಯಾದಗಿರಿ ಜಿಲ್ಲೆಯ ಮೋಕ್ಷ ವಿಶೇಷ ಮಕ್ಕಳ ಶಾಲೆ ನಲ್ಲಿ ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಸಚಿವ ಹಾಗೂ ಶಹಾಪುರ ತಾಲೂಕು ಜನಪ್ರಿಯ ಶಾಸಕರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಅವರ 64ನೇ ಹುಟ್ಟುಹಬ್ಬವನ್ನು ವಿಶೇಷ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಹರ್ಷದಿಂದ ಆಚರಿಸಲಾಯಿತು. ಅವುಗಳನ್ನು ದೇವರ ಸ್ವರೂಪವಾಗಿ, ಏನು ಅರಿಯದ ಮುಗ್ಧ ಮನಸ್ಸುಳ್ಳ ಮಕ್ಕಳಿಂದ ಅವರು ಅತಿಥಿಯು ಅಂದರೆ ದಣಿವರಿಯದ ನಾಯಕ, ಅಭಿವೃದ್ಧಿಯ ಹರಿಕಾರ, ಹಾಲಿನಂತ ಮನಸ್ಸಿನ ಶಾಸಕ ಎಂದು ಗುರುತಿಸಲ್ಪಟ್ಟರು.
ಈ ಸಂದರ್ಭದಲ್ಲಿ ಮಾನ್ಯ ಶ್ರೀ ಲವೀಶ್ ಒರಡಿಯಾ ಐ.ಎ.ಎಸ್., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಮತ್ತು ಶ್ರೀ ಶರಣಪ್ಪ ಪಾಟೀಲ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಮೋಕ್ಷ ವಿಶೇಷ ಮಕ್ಕಳ ಶಾಲೆಗೆ ಧಿಡೀರ ಭೇಟಿ ನೀಡಿ ಶಾಲೆಯ ಕಾರ್ಯಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಆಯುಕ್ತರು, ಶ್ರೀ ರಾಯಪ್ಪ ಛಲವಾದಿ ಸಂಗೊಳ್ಳಿ ರಾಯಣ್ಣ ಯುವ ಘಟಕದ ಅಧ್ಯಕ್ಷರು, ಸಿನು ನಾಶಿ, ಜಗನ್ನಾಥ ವಗ್ಗನವರ, ಪರಮೇಶ ಧೋರನಹಳ್ಳಿ, ಮಲ್ಲಣ್ಣ ತಿಪ್ಪನಹಳ್ಳಿ, ಸಿದ್ಧಾರ್ಥ ತಿಪ್ಪನಹಳ್ಳಿ, ಬಸ್ಸು ಹತ್ತಿಗೂಡುರು, ಮರ್ಧಾನಿ ಸಲಾದಪುರ, ಅನಿಲ್ ಕುಮಾರ, ಹನಮಂತರಾಯಗೌಡ ಶಖಾಪುರ, ರಾಮಚಂದ್ರ ಗೌಡ ಶಖಾಪುರ, ಮೌನೇಶ ರಾಯಚೂರು ಮತ್ತಿತರರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಲ್ಲು ತಿಪ್ಪನಹಳ್ಳಿ, ಕಲಬುರ್ಗಿಯ ಪೊಲೀಸ್ ಇಲಾಖೆ ಸದಸ್ಯರು, ಅವರ ತಾಯಿ ದಿವಂಗತ ನಿಂಗಮ್ಮ ನಟೇಕರ ತಿಪ್ಪನಹಳ್ಳಿ ಅವರ ಸ್ಮರಣಾರ್ಥವಾಗಿ, ಮೊದಲನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ, ಮೋಕ್ಷ ವಿಶೇಷ ಮಕ್ಕಳ ಶಾಲೆಗೆ ಮೈಕ್ ಸೆಟ್ ಕೊಡುಗೆ ನೀಡಿದರು.
ಕಾರ್ಯಕ್ರಮವು ವಿಜೃಂಭಣೆಯಿಂದ ನಡೆದಿದ್ದು, ಸಮುದಾಯದವರು ಮತ್ತು ಶಾಲೆಯ ಮಕ್ಕಳು ಒಂದಾಗಿದ್ದರು.






