ಕಲಬುರ್ಗಿ: ಶ್ರೀ ರೇವಣಸಿದ್ದೇಶ್ವರ ಕೋರಿ ಮಠ, ತರಣ ಸಂಘ ಹಾಗೂ ವಿದ್ಯಾ ವರ್ತಕ ಸಂಘ, ಬ್ರಹ್ಮಪುರ್, ಕೋರಿ ಮಠದಲ್ಲಿ ‘ಮಾತೃ-ಪಿತೃ ಪೂಜಾ ದಿವಸ್’ ಭಕ್ತಿ ಭಾವಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಅನೇಕ ಮಕ್ಕಳು ತಮ್ಮ ತಂದೆ-ತಾಯಿಗಳಿಗೆ ಪೂಜೆ ಸಲ್ಲಿಸಿ, ಅವರ ಆಶೀರ್ವಾದ ಪಡೆದರು.
ಈ ಕಾರ್ಯಕ್ರಮ ಯುವ ಪೀಳಿಗೆಗೆ ಪೋಷಕರ ಮಹತ್ವವನ್ನು ತಿಳಿಸುವುದರ ಜೊತೆಗೆ, ಭಾರತೀಯ ಸಂಸ್ಕೃತಿಯ ಮಹತ್ವವನ್ನು ಸಾರುವ ಉದ್ದೇಶ ಹೊಂದಿತ್ತು. ಸಂತ ಶ್ರೀ ಆಸಾರಾಮ್ ಬಾಪೂಜಿ ಅವರು ಪ್ರೇಮಿಗಳ ದಿನವನ್ನು ಬದಲಾಗಿ ‘ಮಾತೃ-ಪಿತೃ ಪೂಜಾ ದಿವಸ್’ ಆಚರಿಸುವಂತೆ ಪ್ರೇರೇಪಿಸಿದ್ದು, ಈ ಆಚರಣೆಗೆ ಜನಮನ್ನಣೆ ಸಿಕ್ಕಿದೆ.

ಪೋಷಕರ ಆಶೀರ್ವಾದವನ್ನು ಪಡೆಯುವುದು ವೈಯಕ್ತಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಸಹಾಯಕರವಾಗಿದೆ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಒತ್ತಿಹೇಳಿತು. ಈ ಪವಿತ್ರ ಕಾರ್ಯದ ಮೂಲಕ ಮಕ್ಕಳಲ್ಲಿ ಪೋಷಕರಿಗೆ ಗೌರವ, ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ಪ್ರಯತ್ನ ನಡೆದಿದೆ.
ಈ ಸಂದರ್ಭ ಮಠದ ಗುರುಗಳು, ಸಂಘದ ಪ್ರಮುಖರು, ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು. ಸಂಘಟಕರು ಈ ಕಾರ್ಯಕ್ರಮವು ಮುಂದಿನ ದಿನಗಳಲ್ಲೂ ನಿರಂತರ ನಡೆಯುವಂತೆ ಪ್ರೇರೇಪಿಸಲಿದ್ದಾರೆ.
ಇಂತಹ ಸಂಸ್ಕಾರಪೂರ್ಣ ಕಾರ್ಯಕ್ರಮಗಳು ಪೋಷಕರ ಪ್ರೀತಿ ಮತ್ತು ತ್ಯಾಗವನ್ನು ಯುವ ಪೀಳಿಗೆಗೆ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮಠದ ಗುರುಗಳು ಆಶಯ ವ್ಯಕ್ತಪಡಿಸಿದರು.
– ಕಲಬುರ್ಗಿ ಪ್ರತಿನಿಧಿ
– ರಾಜಕುಮಾರ್ ವರದಿಗಾರರು ಕಲಬುರ್ಗಿ ಜಿಲ್ಲೆ






