HomeAnti Corruption Tv“ಸ್ವಾಮಿ ವಿವೇಕಾನಂದ ಜಯಂತಿ”ಯ ಅಂಗವಾಗಿ ರಾಷ್ಟ್ರಾದ್ಯಂತ “ರಾಷ್ಟ್ರೀಯ ಯುವ ದಿನಾಚರಣೆ”

“ಸ್ವಾಮಿ ವಿವೇಕಾನಂದ ಜಯಂತಿ”ಯ ಅಂಗವಾಗಿ ರಾಷ್ಟ್ರಾದ್ಯಂತ “ರಾಷ್ಟ್ರೀಯ ಯುವ ದಿನಾಚರಣೆ”

- Advertisement -spot_img

“ಸ್ವಾಮಿ ವಿವೇಕಾನಂದ ಜಯಂತಿ”ಯ ಅಂಗವಾಗಿ ರಾಷ್ಟ್ರಾದ್ಯಂತ “ರಾಷ್ಟ್ರೀಯ ಯುವ ದಿನಾಚರಣೆ”ಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶ್ರೀ. ಎನ್. ಆರ್. ರಮೇಶ್ ರವರ ಅನುಯಾಯಿಗಳು ಇಂದು “NRR Yuva Brigade” ಗೆ ಅಧಿಕೃತವಾಗಿ ಚಾಲನೆ ನೀಡಿದರು.

ನಿರಂತರವಾಗಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು, ದೀನ ದಲಿತರಿಗೆ ಸಹಾಯ ಹಸ್ತವನ್ನು ಚಾಚುವ ಕಾರ್ಯಗಳನ್ನು ಹಾಗೂ ವಿಕಲಾಂಗರಿಗೆ ನೆರವಿನ ಕಾರ್ಯಗಳನ್ನು ಮಾಡುವ ಸದುದ್ದೇಶದಿಂದ ಪ್ರಾರಂಭವಾಗಿರುವ “NRR Yuva Brigade” ನ ವತಿಯಿಂದ ಇಂದು “ಕಾಲ್ನಡಿಗೆ ಜಾಥಾ”ವನ್ನು ಹಮ್ಮಿಕೊಳ್ಳಲಾಗಿತ್ತು.

“ಐತಿಹಾಸಿಕ ಯಡಿಯೂರು ಕೆರೆ”ಯ ಆವರಣದಲ್ಲಿರುವ “ಸ್ವಾಮಿ ವಿವೇಕಾನಂದ ಪ್ರತಿಮೆ”ಗೆ ಪುಷ್ಟಾರ್ಚನೆ ಮಾಡುವ ಮೂಲಕ “WALKATHON”ಗೆ ಚಾಲನೆ ನೀಡಿದ APS ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀ. ವಿಷ್ಣು ಭರತ್ ರವರು “NRR Yuva Brigade”ನ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು.

ಸೌತ್ ಎಂಡ್ ವೃತ್ತದಲ್ಲಿರುವ ಡಾ|| ರಾಜ್ ಕುಮಾರ್ ಕಂಚಿನ ಪ್ರತಿಮೆಗೆ ಪುಷ್ಟಾರ್ಚನೆ ಮಾಡುವ ಮೂಲಕ ಕಾಲ್ನಡಿಗೆ ಜಾಥಾಗೆ ತೆರೆ ಎಳೆಯಲಾಯಿತು.

SSB Solutions ಸಂಸ್ಥೆಯ ಸಹಕಾರದಿಂದ ಆಯೋಜಿಸಲಾಗಿದ್ದ 1.5 ಕಿ. ಮೀ. ಉದ್ದದ ಈ “WALKATHON” ಕಾರ್ಯಕ್ರಮದಲ್ಲಿ ಸುಮಾರು 1,000 ಮಂದಿ ಯುವಕ – ಯುವತಿಯರು, ಕಾಲೇಜು ವಿದ್ಯಾರ್ಥಿಗಳು, ವಿಶೇಷವಾಗಿ ಅಂಗವಿಕಲರು ಮತ್ತು ಅಂಧರುಭಾಗವಹಿಸಿ ಗಮನ ಸೆಳೆದರು. ಅಲ್ಲದೇ ದೂರದ ಕೊಡಗು, ಹಾಸನ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲೂ ನಡಿಗೆದಾರರು ಜಾಥಾದಲ್ಲಿ ಭಾಗವಹಿಸಿ ಗಮನ ಸೆಳೆದರು.
ಈ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here