HomeAnti Corruption Tvಅಪ್ರಾಪ್ತ ಮಗನಿಗೆ ಕಾರು ಚಾಲನೆಗೆ ಕೊಟ್ಟ ವ್ಯಕ್ತಿಗೆ ಕೋರ್ಟ್ ನಿಂದ 27 ಸಾವಿರ ರೂ. ದಂಡ.!

ಅಪ್ರಾಪ್ತ ಮಗನಿಗೆ ಕಾರು ಚಾಲನೆಗೆ ಕೊಟ್ಟ ವ್ಯಕ್ತಿಗೆ ಕೋರ್ಟ್ ನಿಂದ 27 ಸಾವಿರ ರೂ. ದಂಡ.!

- Advertisement -spot_img

ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆಗೆ ಕೊಡುವ ಪೋಷಕರೇ ಎಚ್ಚರ, ಅಪ್ರಾಪ್ತ ಮಗನಿಗೆ ಚಾಲನೆ ಮಾಡಲು ಕಾರು ನೀಡಿದ ವ್ಯಕ್ತಿಗೆ ಎ.ಎಸ್.ಸಿ.ಎಸ್. ಜೆ.ಎಂ.ಎಫ್.ಸಿ. ನ್ಯಾಯಾಲಯ 27 ಸಾವಿರ ರೂ, ದಂಡ ವಿಧಿಸಿ ತೀರ್ಪು ನೀಡಿದೆ.

ಹೌದು, ಕೆಲವು ತಿಂಗಳ ಹಿಂದೆ ಸಂಚಾರ ಠಾಣೆ ಪೋಲೀಸರು ವಾಹನಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ಕಾರು ನಿಲ್ಲಿಸಿ ತಪಾಸಣೆಗೆ ಒಳಪಡಿಸಿದಾಗ ಚಾಲಕ ಅಪ್ರಾಪ್ತನಾಗಿರುವುದು ಪತ್ತೆಯಾಗಿದ್ದು, ಕೂಡಲೇ. ಬಾಲಕ ಮತ್ತು ದಾವಣಗೆರೆ ನಿವಾಸಿ ಮಂಜುನಾಥ್ ಎಂಬುವರ ವಿರುದ್ಧ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಂಚಾರ ವೃತ್ತ ನಿರೀಕ್ಷಕ ನೆಲವಾಗಲು ಮಂಜುನಾಥ್ ನೇತೃತ್ವದಲ್ಲಿ ಪ್ರಕರಣ ತನಿಖೆ ನಡೆಸಿದ ಪಿಎಸ್ಐ ಶೈಲಜಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಾಗೇಶ್ ಅವರು ಬಾಲಕನಿಗೆ ಕಾರು ಚಾಲನೆಗೆ ನೀಡಿದ ಮಂಜುನಾಥ್ ಗೆ 27 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here