HomeAnti Corruption Tvವಿಚ್ಚೆಧನದ ಬಳಿಕ ಹೆಣ್ಣು ಮಕ್ಕಳ ಶಿಕ್ಷಣ, ಆರೈಕೆ ತಂದೆಯ ಕಾನೂನು ಬದ್ಧ ಜವಾಬ್ದಾರಿ : ಹೈಕೋರ್ಟ್

ವಿಚ್ಚೆಧನದ ಬಳಿಕ ಹೆಣ್ಣು ಮಕ್ಕಳ ಶಿಕ್ಷಣ, ಆರೈಕೆ ತಂದೆಯ ಕಾನೂನು ಬದ್ಧ ಜವಾಬ್ದಾರಿ : ಹೈಕೋರ್ಟ್

- Advertisement -spot_img

ದಂಪತಿಗಳ ನಡುವೆ ಮನಸ್ತಾಪ ಉಂಟಾಗಿ ಅಕಸ್ಮಾತ್ ಗಂಡ ಹೆಂಡತಿ ಏನಾದರೂ, ವಿಚ್ಛೇದನ ಪಡೆದುಕೊಂಡರೆ ಅವರ ಹೆಣ್ಣು ಮಕ್ಕಳ ಶಿಕ್ಷಣ, ಆರೈಕೆ ಸಂಪೂರ್ಣವಾಗಿ ಹಾಗೂ ಕಾನೂನು ಬದ್ಧವಾಗಿ ತಂದೆಯ ಜವಾಬ್ದಾರಿಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

ಬಿ.ಸಿ ಹನುಮಂತರಾಜು ಎನ್ನುವವರು ಜೀವನಾಂಶ ಕೋರಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.ಅರ್ಜಿದಾರರು ಲಾರಿ ಮತ್ತು ಕ್ರಷರ್ ಉದ್ಯಮ ನಡೆಸುತ್ತಿದ್ದು, ಮಾಸಿಕ ಒಂದು ಲಕ್ಷ ಹಣ ಸಂಪಾದನೆ ಮಾಡುತ್ತಾರೆ. ಮಾತ್ರವಲ್ಲದೆ ಅವರು ಒಂದು ಎಕರೆ ಅಡಿಕೆ ತೋಟ ಹೊಂದಿದ್ದು ಅದರಿಂದ ಮಾಸಿಕ 8 ಸಾವಿರ ರೂ. ಗಳಿಕೆ ಇದೆ.

ಹೀಗಿರುವಾಗ ವಿಚಾರಣಾ ನ್ಯಾಯಾಲಯವು ಇಬ್ಬರು ಪುತ್ರಿಯರಿಗೆ ಮಾಸಿಕ ತಲಾ 6 ಸಾವಿರ ರೂ. ಪಾವತಿಸುವಂತೆ ಆದೇಶಿಸಿರುವುದಲ್ಲಿ ಯಾವುದೇ ದೋಷವಿಲ್ಲ. ಜೊತೆಗೆ ಹೆಣ್ಣು ಮಗುವಿನ ಆರೈಕೆ ತಂದೆಯಾದವನ ಕಾನೂನುಬದ್ಧ ಜವಾಬ್ದಾರಿ ಹಾಗೂ ಪತ್ನಿಯಿಂದ ಬೇರೆಯಾಗಿ ಜೀವನ ಸಾಗಿಸುತ್ತಿದ್ದರೂ ಸಹ ಮಗುವಿಗೆ ಉತ್ತಮ ಶಿಕ್ಷಣ ನೀಡುವುದು ಆತನ ಕರ್ತವ್ಯ ಎಂದು ಅಭಿಪ್ರಾಯಪಟ್ಟು, ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿಹಿಡಿದಿದೆ.

ಪ್ರಕರಣ ಏನು?

ಅರ್ಜಿದಾರರು ಹಾಗೂ ಅವರ ಪತಿ ಕಳೆದ 11 ವರ್ಷಗಳ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಬಳಿಕ ಕೌಟುಂಬಿಕ ನ್ಯಾಯಾಲಯವು ಇಬ್ಬರು ಹೆಣ್ಣು ಮಕ್ಕಳ ಮದುವೆಯಾಗುವವರೆಗೆ ಪ್ರತಿ ತಿಂಗಳು 6,000 ಹಣ, ಹಿರಿಯ ಮಗಳ ವಾರ್ಷಿಕ ಶಿಕ್ಷಣ ಶುಲ್ಕ 1.4 ಲಕ್ಷ ಹಾಗೂ ದಾವೆ ಶುಲ್ಕ 5 ಸಾವಿರ ಪಾವತಿಸುವಂತೆ ಆದೇಶ ಹೊರಡಿಸಿತ್ತು.

ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ವೇಳೆ ಹೆಣ್ಣು ಮಗುವಿನ ಆರೈಕೆ ತಂದೆಯಾದವನ ಕಾನೂನುಬದ್ಧ ಜವಾಬ್ದಾರಿ ಹಾಗೂ ಪತ್ನಿಯಿಂದ ಬೇರೆಯಾಗಿ ಜೀವನ ಸಾಗಿಸುತ್ತಿದ್ದರೂ ಸಹ ಮಗುವಿಗೆ ಉತ್ತಮ ಶಿಕ್ಷಣ ನೀಡುವುದು ಆತನ ಕರ್ತವ್ಯ ಎಂದ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿಹಿಡಿದಿದೆ.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here