HomeAnti Corruption TvBBMP ಕಸದ ಲಾರಿ ಹಾಗೂ ಬೈಕ್‌ ನಡುವೆ ಅಪಘಾತ ಇಬ್ಬರು ಯುವಕ ಯುವತಿ ಸಾವು

BBMP ಕಸದ ಲಾರಿ ಹಾಗೂ ಬೈಕ್‌ ನಡುವೆ ಅಪಘಾತ ಇಬ್ಬರು ಯುವಕ ಯುವತಿ ಸಾವು

- Advertisement -spot_img

BBMP ಕಸದ ಲಾರಿ ಹಾಗೂ ಬೈಕ್‌ ನಡುವೆ ಅಪಘಾತವಾಗಿದ್ದು, ಇಬ್ಬರು ಟೆಕ್ಕಿಗಳು ಮೃತಪಟ್ಟ ಘಟನೆ ಬೆಂಗಳೂರಿನ ಕೆ.ಆರ್‌ ಸರ್ಕಲ್‌ ಬಳಿ ನಡೆದಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಪ್ರಶಾಂತ್‌ ಮತ್ತು ಶಿಲ್ಪಾ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಪ್ರಶಾಂತ್‌ ಮತ್ತು ಶಿಲ್ಪಾ ಮೆಜೆಸ್ಟಿಕ್‌ನಿಂದ ಕೆ.ಆರ್‌. ಸರ್ಕಲ್‌ ಕಡೆ ಬರುತ್ತಿದ್ದಾಗ ಭಾನುವಾರ ರಾತ್ರಿ ಕಸದ ಲಾರಿ ಡಿಕ್ಕಿಯಾಗಿದೆ. ಕೆಳಕ್ಕೆ ಬಿದ್ದ ಇಬ್ಬರ ಮೇಲೂ ವಾಹನದ ಚಕ್ರ ಹರಿದಿದೆ. ಗಂಭೀರ ಗಾಯಗೊಂಡ ಇಬ್ಬರು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ನಿವಾಸಿಯೇ ಆಗಿರುವ ಪ್ರಶಾಂತ್‌, ಶಿಲ್ಪಾ ಇಬ್ಬರೂ ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಇಬ್ಬರೂ ಮೆಜೆಸ್ಟಿಕ್‌ನಿಂದ ಕೆ.ಆರ್‌ ಸರ್ಕಲ್‌ ಮಾರ್ಗವಾಗಿ ಬೈಕ್‌ನಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಕೆಆರ್‌ ವೃತ್ತದ ತಿರುವಿನಲ್ಲಿ ಘಟನೆ ನಡೆದಿದ್ದು, ಬೈಕ್‌ಗೆ ಡಿಕ್ಕಿ ಹೊಡೆದರೂ ಲಾರಿ ನಿಲ್ಲಿಸದೇ ಸುಮಾರು 10 ಮೀಟರ್‌ನಷ್ಟು ದೂರಕ್ಕೆ ಬೈಕ್‌ ಸವಾರರನ್ನ ಲಾರಿ ಡ್ರೈವರ್ ಎಳೆದೊಯ್ದಿದ್ದಾನೆ. ” ನನ್ನ ಮಗ ಹುಟ್ಟಿದ್ದು ಈ ಆಸ್ಪತ್ರೆಯಲ್ಲೇ ಈಗ ಸತ್ತಿದ್ದು ಕೂಡ ಈ ಆಸ್ಪತ್ರೆಯಲ್ಲೇ, ಒಂದು ವೇಳೆ ಆ ಲಾರಿ ಚಾಲಕನ್ನು ಬಂಧಿಸದ್ದಿದರೆ ನಾನೇ ಕೊಲೆ ಮಾಡುವೇ ” ಎಂದು ತಂದೆ ಲೋಕೇಶ್‌ ಹೇಳಿಕೆ ನೀಡಿದ್ದಾರೆ.

ವರದಿ : ಆಂಟೋನಿ ಬೇಗೂರು

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here