ಗಿರಿನಗರ ಪೊಲೀಸ್‌ಠಾಣಾ ಸರಹದ್ದಿನಲ್ಲಿ ವರದಿಯಾಗಿದ್ದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ವ್ಯಕ್ತಿಯು ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಇದ್ದುದರಿಂದ, ಈತನ ವಿರುದ್ಧ ಮಾನ್ಯ ನ್ಯಾಯಲಯವು ದಸಗಿರಿ ವಾರೆಂಟ್‌ನ್ನು ಹೊರಡಿಸಿರುತ್ತದೆ.
ಈತನ ಪತ್ತೆಗಾಗಿ ಗಿರಿನಗರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳನ್ನು ನೇಮಕ ಮಾಡಿದ್ದು, ಅವರುಗಳು ಬಾತ್ಮೀದಾರರಿಂದ ಖಚಿತವಾದ ಮಾಹಿತಿಯನ್ನು ಪಡೆದು, ದಿನಾಂಕ:31.05.2024 ರಂದು ಆತನನ್ನು ಮೈಸೂರಿನ ಕೃಷ್ಣರಾಜ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ಪತ್ತೆ ಮಾಡಿ, ದಿನಾಂಕ:01.06.2024 ರಂದು ಮಾನ್ಯ ಸಿಸಿಹೆಚ್ 12ನೇ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.
ಈ ಕಾರ್ಯವನ್ನು ಬೆಂಗಳೂರು ನಗರ, ದಕ್ಷಿಣ ವಿಭಾಗದ ಮಾನ್ಯ ಉಪ-ಪೊಲೀಸ್‌ಆಯುಕ್ತರಾದ ಶ್ರೀ.ಲೋಕೇಶ್ ಭರಮಪ್ಪ ಜಗಳಾಸ ಐ.ಪಿ.ಎಸ್ ಹಾಗೂ ವಿವಿಪುರಂ ಉಪವಿಭಾಗದ ಎಸಿಪಿರವರಾದ ಶ್ರೀ.ಶಮಿದ್ ಬಾಷಾರವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳು ರೌಡಿ ವ್ಯಕ್ತಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
Stay Connected
Must Read






