HomeAnti Corruption Tvರಾತ್ರಿ ವೇಳೆ ಹ್ಯಾಂಡಲ್ ಲಾಕ್ ಮುರಿದು ದ್ವಿ-ಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ.

ರಾತ್ರಿ ವೇಳೆ ಹ್ಯಾಂಡಲ್ ಲಾಕ್ ಮುರಿದು ದ್ವಿ-ಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ.

- Advertisement -spot_img

ದಿನಾಂಕ 11-05-2024 ರಂದು ರಾತ್ರಿ ಸಮಯದಲ್ಲಿ ನಾಗೇಂದ್ರ ಬ್ಲಾಕ್‌ನಲ್ಲಿರುವ ಸ್ಕೂಲ್ ಬಳಿ ಸ್ನೇಹಿತನನ್ನು ನೋಡಲು ಬಂದಿದ್ದು, ಆ ವೇಳೆ ನನ್ನ ದ್ವಿ-ಚಕ್ರ ವಾಹನವನ್ನು ಲಾಕ್ ಮಾಡಿ ನಿಲ್ಲಿಸಿ, ಸ್ನೇಹಿತನನ್ನು ಮಾತನಾಡಿಸಿಕೊಂಡು ಆ ದಿನ ತುಂಬಾ ಮಳೆ ಬರುತ್ತಿದ್ದ ಕಾರಣ ದ್ವಿ-ಚಕ್ರ ವಾಹನವನ್ನು ಅಲ್ಲಿಯೇ ಬಿಟ್ಟು ಆಟೋದಲ್ಲಿ ಮನೆಗೆ ಹೊರಟು ಹೋದೆನು. ನಂತರ ದಿನಾಂಕ 15-05-2024 ರಂದು ಬೆಳಿಗ್ಗೆ 09-00 ಗಂಟೆಗೆ ದ್ವಿ-ಚಕ್ರ ವಾಹನವನ್ನು ತರಲೆಂದು ನಿಲ್ಲಿಸಿದ್ದ ಜಾಗಕ್ಕೆ ಹೋಗಿ ನೋಡಿದಾಗ, ಅಲ್ಲಿ ದ್ವಿ-ಚಕ್ರ ವಾಹನ ಇರಲಿಲ್ಲ. ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು, A.A ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ ಸಹಾಯದಿಂದ ಇಬ್ಬರು ವ್ಯಕ್ತಿಗಳನ್ನು ದಿನಾಂಕ: 26-05-2024 ರಂದು ಹೊಸಕೆರೆ ಹಳ್ಳಿ ನಂದನವನ ಬಳಿ ವಶಕ್ಕೆ ಪಡೆದು, ಸುದೀರ್ಘವಾಗಿ ವಿಚಾರ ಮಾಡಲಾಗಿ, ಅವರುಗಳಿಂದ 7,00,000/- (ಏಳು ಲಕ್ಷ ರೂಪಾಯಿ) ಬೆಲೆ ಬಾಳುವ 11 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ನಂತರ ಇಬ್ಬರು ವ್ಯಕ್ತಿಗಳನ್ನು ದಿನಾಂಕ:27/05/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜಪ್ಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.

ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೋಕೇಶ್.ಭ ಜಗಲಾಸ‌ ಹಾಗೂ ವಿ.ವಿ.ಪುರಂ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಶಾಮಿದ್ ಬಾಷ ರವರ ಮಾರ್ಗದರ್ಶನದಲ್ಲಿ ಗಿರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here