HomeAnti Corruption Tvಕರ್ನಾಟಕ ಲೋಕಸೇವಾ ಆಯೋಗದ (KPSC) ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ 74.10 ಕೋಟಿ ಪಡೆದುಕೊಂಡು ನಗಲಿ ನೇಮಕಾತಿ...

ಕರ್ನಾಟಕ ಲೋಕಸೇವಾ ಆಯೋಗದ (KPSC) ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ 74.10 ಕೋಟಿ ಪಡೆದುಕೊಂಡು ನಗಲಿ ನೇಮಕಾತಿ ಅದೇಶದ ದಾಖಲಾತಿಗಳನ್ನು ಸೃಷ್ಠಿಸಿ ವಂಚಿಸಿದ್ದ ನಾಲ್ವರ ಬಂಧನ.

- Advertisement -spot_img

ದಿನಾಂಕ:26/03/2024 ರಂದು ಓರ್ವ ಮಹಿಳೆಯು ದೂರನ್ನು ಸಿಸಿಬಿ ಪೊಲೀಸ್ ಠಾಣೆಗೆ ಸಲ್ಲಿಸಿರುತ್ತಾರೆ. ದೂರಿನಲ್ಲಿ ಓರ್ವ ವ್ಯಕ್ತಿಯು ಆತನ ಸಹಚರರೊಂದಿಗೆ ಸೇರಿಕೊಂಡು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ, ಪಿರಾದುದಾರರಿಗೆ 5 ಕೋಟಿಗೆ ಬೇಡಿಕೆ ಇಟ್ಟಿರುತ್ತಾನೆ. ನಂತರ ಹಂತ ಹಂತವಾಗಿ ಪಿರಾದುದಾರರಿಂದ ಒಟ್ಟು  410,00,000/- (ನಾಲ್ಕು ಕೋಟಿ ಹತ್ತು ಲಕ್ಷ ರೂಪಾಯಿ) ನಗದು ಮತ್ತು ಬ್ಯಾಂಕ್ ಖಾತೆ ಮೂಲಕ ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ. ನಂತರ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯತ್ವ ಸಂಬಂಧ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಟಿಪ್ಪಣಿ, ನಡಾವಳಿ ಹಾಗೂ ನಕಲಿ ಸಹಿಗಳನ್ನು ಮಾಡಿರುವ ಪತ್ರ ಮತ್ತು ಮಾನ್ಯ ರಾಜ್ಯಪಾಲರ ಹೆಸರಿನಲ್ಲಿ ಸುಳ್ಳು ರಾಜ್ಯ ಪತ್ರವನ್ನು ಸೃಷ್ಟಿಸಿ ಮೋಸ ಮಾಡಿರುವುದಾಗಿ ದೂರನ್ನು ನೀಡಿರುತ್ತಾರೆ. ಈ ಸಂಬಂಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆ ಮುಂದುವರೆಸಿ, ಅದೇ ದಿನ ಅಂದರೆ ದಿನಾಂಕ:26/03/2024 ರಂದು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ವಶಕ್ಕೆ ಪಡೆದ ವ್ಯಕ್ತಿಗಳ ವಿಚಾರಣೆಯಿಂದ ದಿನಾಂಕ:29/03/2024 ರಂದು ಮತ್ತಿಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ವಶಕ್ಕೆ ಪಡೆದುಕೊಂಡ ವ್ಯಕ್ತಿಗಳಿಂದ ಒಟ್ಟು * 40,00,000/- (ನಲವತ್ತು ಲಕ್ಷ ರೂಪಾಯಿ) ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಇಬ್ಬರು ಆರೋಪಿಗಳನ್ನು ದಿನಾಂಕ: 06/04/2024 ರ ವರೆಗೆ ಪೊಲೀಸ್‌ ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತದೆ. ಈ ಜಾಲದಲ್ಲಿ ಶಾಮೀಲಾಗಿರಬಹುದಾದ ಉಳಿದ ಆರೋಪಿಗಳ ಬಗ್ಗೆ ಪತ್ತೆಕಾರ್ಯ
ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿ/ಸಿಬ್ಬಂದಿಯವರುಗಳು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here