ಬೆಂಗಳೂರು ನಗರದಲ್ಲಿ ಕ್ರೈಂ ಕೇಸುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಬಿ. ದಯಾನಂದ್ ನಗರದಲ್ಲಿ ಹೊಯ್ಸಳ ಬೀಟ್ ಸಿಬ್ಬಂದಿಗಳಿಂದ ಡೀಟೇಲ್ ರಿಪೋರ್ಟ್ ಪಡೆದಿದ್ದಾರೆ.
ಹೊಯ್ಸಳ ಸಿಬ್ಬಂದಿಗಳು ಟೈಮ್ ಟು ಟೈಮ್ ತಮ್ಮ ಲಿಮಿಟ್ಸ್ ಗಳಲ್ಲಿ ರೌಂಡ್ಸ್ ಹಾಕಬೇಕು. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ದಯಾನಂದ ಅವರು ಯಾರ್ಯಾರು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಅನ್ನೋ ವರದಿ ಪಡೆದಿದ್ದಾರೆ.

ಮಡಿವಾಳದಲ್ಲಿ ಕ್ರೈಂ ಹೆಚ್ಚಳ
ಇತ್ತೀಚಿನ ದಿನಗಳಲ್ಲಿ ಮಡಿವಾಳದಲ್ಲಿ ರೋಡ್ ರೇಂಜ್ ಸುಲಿಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಕೆಲದಿನಗಳ ಹಿಂದೆ ಅಷ್ಟೇ ಬೇಕರಿ ಒಂದರಲ್ಲಿ ಕಳ್ಳರು ಬೇಕರಿ ಶೆಟ್ಟರ್ ಮುರಿದು ದರೋಡೆ ಮಾಡಿದರು.ಇದೀಗ ಅದೇ ಸ್ಥಳದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳೀಯರು ಮಾಹಿತಿ ಪ್ರಕಾರ ಪುಂಡರ ಹಟ್ಟಹಾಸ ಜಾಸ್ತಿಯಾಗಿದೆ, ಈ ಸ್ಥಳದಲ್ಲಿ ಹೆಚ್ಚಾಗಿ ಮಕ್ಕಳು, ಹಿರಿಯರು ಹಾಗೂ ಮಹಿಳೆಯರು ವಾಸವಾಗಿದ್ದು ಅವರಿಗೆ ಭಯದ ವಾತಾವರಣ ಉಂಟಾಗಿದೆ.
ಸ್ಥಳೀಯರ ಮಾಹಿತಿ

ವಸತಿ ಸ್ಥಳದಲ್ಲಿ ಲಾಡ್ಜ್ ಗಳು ಹೆಚ್ಚಾಗಿದೆ, ಮಾರುತಿ ನಗರ 3ನೇ ಕ್ರಾಸ್ ನಲ್ಲಿ ಇರುವ ಬ್ಲೂಮ್ಸ್ ಇನ್ ಲಾಡ್ಜ್ ನಲ್ಲಿ ದಿನನಿತ್ಯ ಜಗಳಗಳು ನಡೆಯುತ್ತಾಳೆ ಇದೆ, ಕುಡುಕರ ಕುಡಿದಿದ್ದ ಮತ್ತಿನಲ್ಲಿ ಮನೆ ಮುಂದೆ ಮೂತ್ರ ವಿಸರ್ಜನೆ ಹಾಗೂ ಇತರ ಚಟುವಟಿಕೆಗಳು ಹೆಚ್ಚಾಗುತ್ತಿದೆ.

ಕರವೇ ಬಿಟಿಎಂ ವಿ ಕ್ಷೇತ್ರ ಅಧ್ಯಕ್ಷರ ಹೇಳಿಕೆ

ಕನ್ನಡಿಗರಿಗೆ ರಕ್ಷಣೆ ಇಲ್ಲ, ಹೊರ ರಾಜ್ಯದಿಂದ ಬಂದು ಇಲ್ಲಿ ವಾಸ ಇದ್ದು ಇಲ್ಲಿ ವ್ಯಾಪಾರ ಮಾಡಿ ಇಲ್ಲಿ ಇರುವರಿಗೆ ತೊಂದರೆ ಕೊಡುತ್ತಿದ್ದಾರೆ. ಮಡಿವಾಳ ಸುತ್ತಮುತ್ತ ಸ್ಥಳಗಳಲ್ಲಿ ಲಾಡ್ಜ್ ಮಸಾಜ್ ಪಾರ್ಲರ್ಗಳು ಇತರ ದಂಧೆಗಳು ಹೆಚ್ಚಾಗಿದೆ. ಕನ್ನಡರಿಗೆ ಅನ್ಯಾಯ ಆಗಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಕೊಳ್ಳುವುದಾಗಿ ಕರವೇ ಬಿಟಿಎಂ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಸಂಜೀವ್ ಗೌಡ ಹೇಳಿದ್ದಾರೆ.






