HomeAnti Corruption Tvಡ್ರಗ್ಸ್ ವ್ಯಸನಿ ಅಳಿಯ, ಹಿಂಸಿಸಿ ಮಗಳನ್ನು ಕೊಂದಿದ್ದಾನೆ: ತಾಯಿ ಪೊಲೀಸರಿಗೆ ದೂರು

ಡ್ರಗ್ಸ್ ವ್ಯಸನಿ ಅಳಿಯ, ಹಿಂಸಿಸಿ ಮಗಳನ್ನು ಕೊಂದಿದ್ದಾನೆ: ತಾಯಿ ಪೊಲೀಸರಿಗೆ ದೂರು

- Advertisement -spot_img

ಬೆಂಗಳೂರು: ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ನಂದಿನಿ (24) ಎಂಬುವವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಪ್ರಕರಣ ಸಂಬಂಧ ಅವರ ತಾಯಿ ಪೊಲೀಸರಿಗೆ ದೂರು ನೀಡಿದ್ದು, ‘ಡ್ರಗ್ಸ್ ವ್ಯಸನಿಯಾದ ಅಳಿಯ ಗೌತಮ್, ಮಗಳಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾನೆ’ ಎಂದು ಆರೋಪಿಸಿದ್ದಾರೆ.
ಹೆಣ್ಣೂರು ಸೊನ್ನಪ್ಪ ಲೇಔಟ್‌ನ ಗೌತಮ್ ಹಾಗೂ ಗುಡ್ಡದಹಳ್ಳಿಯ ನಂದಿನಿ, ಪರಸ್ಪರ ಪ್ರೀತಿಸಿ ಮದುವೆ ಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಏಪ್ರಿಲ್ 6ರಂದು ನೇಣು ಬಿಗಿದ ಸ್ಥಿತಿಯಲ್ಲಿ ನಂದಿನಿ ಮೃತದೇಹ ಪತ್ತೆಯಾಗಿತ್ತು.
ಸಾವಿನ ಬಗ್ಗೆ ದೂರು ನೀಡಿರುವ ನಂದಿನಿ ತಾಯಿ, ‘ನನ್ನ ಒಬ್ಬಳೇ ಮಗಳು ನಂದಿನಿ. ಕಷ್ಟಪಟ್ಟು ಸಾಕಿದ್ದೆ. ಐದು ವರ್ಷದ ಹಿಂದೆಯಷ್ಟೇ ನಂದಿನಿ, ಗೌತಮ್‌ನನ್ನು ಪ್ರೀತಿಸಿ ಮದುವೆ ಯಾಗಿದ್ದಳು. ಕೆಲ ತಿಂಗಳ ನಂತರ ಅಳಿಯ ಮದ್ಯ ಕುಡಿದು ಬಂದು ಮಗಳಿಗೆ ಹೊಡೆಯುತ್ತಿದ್ದ. ಡ್ರಗ್ಸ್ ವ್ಯಸನಿ ಯಾಗಿದ್ದ ಅಳಿಯ, ನಿತ್ಯವೂ ಮಗಳಿಗೆ ಕಿರುಕುಳ ನೀಡುತ್ತಿದ್ದ’ ಎಂದಿದ್ದಾರೆ.
ಪತಿ ನೀಡುತ್ತಿದ್ದ ಕಿರುಕುಳದ ಬಗ್ಗೆ ನಂದಿನಿ ಹಲವು ಬಾರಿ ನನಗೆ ಹೇಳಿದ್ದಳು. ಏಪ್ರಿಲ್ 6ರಂದು ಕರೆ ಮಾಡಿದ್ದ ಅಳಿಯ, ‘ನಂದಿನಿ ನೇಣು ಹಾಕಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ’ ಎಂದಿದ್ದ. ಆಸ್ಪತ್ರೆಗೆ ಹೋದಾಗ, ಮಗಳು ಮೃತಪಟ್ಟಿದ್ದು ಗೊತ್ತಾಗಿತ್ತು. ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಅಳಿಯ, ಮಗಳ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಚಿತ್ರಹಿಂಸೆ ನೀಡುತ್ತಿದ್ದ. ಆತನೇ ಮಗಳನ್ನು ಕೊಲೆ ಮಾಡಿ ಆತ್ಮಹತ್ಯೆ ನಾಟಕವಾಗುತ್ತಿರುವ ಅನುಮಾನವಿದೆ’ ಎಂದು ತಾಯಿ ದೂರಿದ್ದಾರೆ. ‘ಮಗಳ ಕುತ್ತಿಗೆಯಲ್ಲಿ ಗಾಯದ ಗುರುತು ಇದೆ. ಕೊಲೆ ಎಂಬುದಾಗಿ ಹೇಳಿದರೂ ಪೊಲೀಸರು ಸೂಕ್ತ ತನಿಖೆ ನಡೆಸುತ್ತಿಲ್ಲ. ಈ ಹಿಂದೆ ಮನೆಯಲ್ಲಿ ಗಲಾಟೆ ಆಗಿದ್ದಾಗ ಠಾಣೆಗೆ ದೂರು ನೀಡಿದ್ದ ಮಗಳು, ‘ನನಗೆ ಏನಾದರೂ ತೊಂದರೆಯಾದರೆ, ಪತಿ ಗೌತಮ್ ಹಾಗೂ ಆತನ ಮನೆಯವರು ಕಾರಣ’ ಎಂದಿದ್ದರು. ಇದಾದ ನಂತರವೇ ಮಗಳ ಕೊಲೆಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ನನಗೆ ನ್ಯಾಯ ಒದಗಿಸಬೇಕು’ ಎಂದೂ ತಾಯಿ ಕೋರಿದ್ದಾರೆ. ಹೆಣ್ಣೂರು ಪೊಲೀಸರು, ‘ನಂದಿನಿ ಸಾವಿನ ಬಗ್ಗೆ ತನಿಖೆ ಮುಂದುವರಿ ಸಲಾಗಿದೆ. ಪತಿ ಗೌತಮ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮರಣಪತ್ರ ಹಾಗೂ ಇತರೆ ಸಾಕ್ಷ್ಯಗಳನ್ನು ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಾಲ ಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here