ಬೆಂಗಳೂರು ನಗರ ಚೆಕ್ಪೋಸ್ಟ್ ನಿವಾಸಿ ಸಮಾಜಸೇವಕರು ಕೋದಂಡರಾಮ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇವರು ಸ್ವಾತಂತ್ರ್ಯ ಅಭ್ಯರ್ಥಿಯಾಗಿ 2015 ರಲ್ಲಿ ಸುದ್ದುಗುಂಟೆಪಾಳ್ಯ ಪಾಳ್ಯ ವಾರ್ಡ್ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದರು ಈ ಚುನಾವಣೆಯಲ್ಲಿ ಒಳ್ಳೆಯ ಮತವನ್ನು ತೆಗೆದು ಎರಡನೇ ಸ್ಥಾನ ಪಡೆದರು, ಎರಡು ರಾಷ್ಟ್ರೀಯ ಪಕ್ಷಗಳು ಹಾಗೂ ಒಂದು ಪ್ರಾದೇಶಿಕ ಪಕ್ಷದ ನಡುವೆ ಒಳ್ಳೆ ಅಂತರದಲ್ಲಿ ಮತವನ್ನು ಪಡೆದಿದ್ದರು.

ಕೆಲವು ದಿನಗಳ ಹಿಂದೆ ಅಷ್ಟೇ ಕೋದಂಡರಾಮ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಬಿಟಿಎಂ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವುದಾಗಿ ತಿಳಿಸಿರುತ್ತಾರೆ ಆನಂತರ ಕೆಲವು ಬೆದರಿಕೆ ಕರೆಗಳು ಹಾಗೂ ವೈಯಕ್ತಿಕ ಕಾರಣಗಳಿಂದ ಅವರು ಈಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಟಿಎಂ ಮತದಾರರು ಕ್ಷೇತ್ರದ ಅಭಿವೃದ್ಧಿಗಾಗಿ ಮತವನ್ನು ನೀಡಬೇಕೆಂದು ಅವರು ಮನವಿ ಮಾಡಿಕೊಂಡರು.
ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಗೆ ಬಿಗ್ ಶಾಕ್ .

ಕೋದಂಡರಾಮ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದವರದೊಂದಿಗೆ ಗುರುತಿಸಿಕೊಂಡಿದ್ದರು, ಕೆಲವು ಕಾರಣಗಳಿಂದ ಅವರು ಇತ್ತೀಚೆಗೆ ದೂರವಾಗಿದ್ದರು. ಈ ಆಂದೋಲನ ಬಿಟಿಎಂ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲಾಗಿದೆ. ಮೂಲಗಳ ಪ್ರಕಾರ ಕೋದಂಡರಾಮ ಮುಂಬರುವ ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಪ್ರಯತ್ನ ಮಾಡುತ್ತಿದ್ದರು, ಪ್ರಯತ್ನ ವಿಫಲ ಕೊಂಡಾಗ ಅವರು ಬಿಜೆಪಿ ಸೇರಿದ್ದಾರೆ ಎನ್ನಲಾಗಿದೆ.
ಇದೀಗ ಬಿಜೆಪಿ ಇವರಿಗೆ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಅವಕಾಶ ನೀಡುತ್ತಾರ? ಇಲ್ಲವಾ? ಎನ್ನುವುದನ್ನು ಕಾದು ನೋಡಬೇಕಾಗಿದೆ.






