ಜೆಡಿಎಸ್ ಮುಖಂಡನ ಮೇಲೆ ಹಲ್ಲೆ….
ವಿಶ್ವನಾಥ್ ರೆಡ್ಡಿ ದರ್ಶನಾಪುರ ರವರಿಂದ ಮತ್ತು ಬೆಂಬಲಿ ಗರಿಂದ
ಜೆಡಿಎಸ್ ನಗರ ಘಟಕದ ಅಧ್ಯಕ್ಷ, ಆರ್ಟಿಐ ಕಾರ್ಯಕರ್ತ ಬಸವರಾಜ ಅರುಣಿ ಅವರನ್ನು ತಮ್ಮ ಮನೆಗೆ ಕರೆಯಿಸಿ ಬಟ್ಟೆ ಬಿಚ್ಚಿಸಿ, ಹಲ್ಲೆ ನಡೆಸಿದ್ದು….
ಅಲ್ಲದೇ ಅರೆ ನಗ್ನವಾಗಿ ನಿಲ್ಲಿಸಿ ದೌರ್ಜನ್ಯವೆಸಗಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಲ್ಲೆ: ‘ಸೋಮವಾರ ಕೆಲವರು ನನ್ನನ್ನು ಕರೆದೊಯ್ದು ಮನೆಯಲ್ಲಿ ಕೂಡಿಹಾಕಿ ಒತ್ತಾಯದಿಂದ ಬಟ್ಟೆ ಬಿಚ್ಚಿಸಿದರು…..
ವಿಶ್ವನಾಥರಡ್ಡಿ ಅವರು
ಕಾಲಿನಿಂದ ಒದ್ದು ಹಲ್ಲೆ ಮಾಡಿದರು. ನಂತರ ಬಲವಂತದಿಂದ ಶಹಾಪುರ ಠಾಣೆಗೆ ಕರೆದೊಯ್ದು ಪೊಲೀಸರಿಂದ ವಿಚಾರಣೆಗೆ ಒಳಪಡಿಸಿ, ಮನೆಗೆ
ಅವರ “ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್ ಕುರಿತು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ವಾಪಸಿಗೆ ಒತ್ತಡ ಹಾಕಿ ಹಲ್ಲೆ ಮಾಡಿದ್ದಾರೆ. ಇದಕ್ಕೆ ಹಿಂದುಳಿದ ವರ್ಗಗಳ ಅಧಿಕಾರಿ ಶರಣಪ್ಪ ಬಳಬಟ್ಟಿ ಕುಮ್ಮಕ್ಕು ಇದೆ ಎಂದೂ ತಿಳಿಸಿದ್ದಾರೆ.
ವಂಚನೆ ಆರೋಪ: ‘ಬಸವರಾಜ ಅರುಣಿ ಅನಗತ್ಯವಾಗಿ ಆರ್ಟಿಐ ಅಡಿ ದೂರು ಸಲ್ಲಿಸಿ ಮಾಹಿತಿ ಕೇಳುವ ನೆಪದಲ್ಲಿ 15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಎಂದು ವಿಶ್ವನಾಥರಡ್ಡಿ ದರ್ಶನಾಪುರ ಆರೋಪಿಸಿದ್ದಾರೆ.
‘ಸಂಧಾನಕ್ಕೆಂದು ಮನೆಗೆ ತಿನಿಸು ತಂದಿದ್ದರು. ಅದರಲ್ಲಿ ವಿಷ ಬೆರೆಸಿದ್ದರು. ಇದನ್ನು ತಿಳಿದು ಅವರನ್ನು ಪೊಲೀಸರಿಗೆ ಒಪ್ಪಿಸಿದೆ’ ಎಂದರು







