ಪಾವಗಡ ವಿವಾಹವಾಗಿದ್ದ ಪುರುಷನೊಬ್ಬ ಬೇರೆ ಸಮುದಾಯದ ಹೆಣ್ಣುಮಗಳನ್ನು ಪುಸುಲಾಯಿಸಿ ಪ್ರೀತಿ ಪ್ರೇಮ ಹೆಸರಲ್ಲಿ ಅಪರಿಸಿಕೊಂಡು ಹೋಗಿದ್ದಾನೆ.
ತದನಂತರ ವಿಷಯ ತಿಳಿದು ನಂತರ ಕುಟುಂಬ ಸದಸ್ಯರು ಕಾಣೆಯಾಗಿದ್ದ ಇಬ್ಬರನ್ನು ಹುಡುಕಿ ಕರೆ ತಂದು ಬುದ್ಧಿ ಹೇಳಿ ತಮ್ಮ ತಮ್ಮ ಮನೆಗಳಿಗೆ ಇಬ್ಬರನ್ನು ಕಳಿಸಿದ್ದಾರೆ.
ಕೆಲವು ದಿನಗಳ ನಂತರ ನಾಗೇಂದ್ರ ನಾಪತ್ತೆ ವಿಷಯದ ಬಗ್ಗೆ ಮನೆಯವರಾಗಲಿ ಅಕ್ಕ ಪಕ್ಕದವರಾಗಲಿ ಯಾರು ತಲೆ ಕೆಡಿಸಿಕೊಂಡಿರಲಿಲ್ಲ.
ಆದರೆ ಮೂರು ವರ್ಷಗಳ ನಂತರ ದಿಢೀರನೆ ನಾಗೇಂದ್ರನ ತಂದೆ ಪಾವಗಡ ಪೋಲಿಸ್ ಠಾಣೆ ಎಲ್ಲಿ ಹೋಗಿ ಮಗನನ್ನು ಹತ್ಯೆ ಮಾಡಿದ್ದಾರೆ ಎಂಬುದಾಗಿ ದೂರು ಸಲ್ಲಿಸಿ ಪಾವಗಡ ಪೊಲೀಸ್ ತನಿಖೆಯಲ್ಲಿ ನಾಗೇಂದ್ರ ಹತ್ಯೆ ಎಂಬುದರ ಬಗ್ಗೆ ತಿಳಿದು ಬಂದು ನಂತರ ಐದು ಜನರನ್ನು ಬಂಧಿಸಲಾಗಿದೆ.
ಈ ಪ್ರಕರಣ ಕೊಲೆಯಾದ ಮೂರು ವರ್ಷಗಳ ಕಾಲ ಏಕೆ ಮುಚ್ಚಿಡಲಾಗಿತ್ತು ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಗಳೊಂದಿಗೆ ಪ್ರಕರಣ ಮುಚ್ಚಿ ಹಾಕಲು ಮುಖಂಡರುಗಳ ಕೈವಾಡ ಸಹ ಇದೇ ಎಂಬುದರ ಬಗ್ಗೆ ಸಾರ್ವಜನಿಕರ ಹೊಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.
ಈ ಕೊಲೆಯ ಪ್ರಕರಣ ಸಂಪೂರ್ಣವಾಗಿ ತನಿಖೆ ಮಾಡಿ ಇದರಲ್ಲಿ ಭಾಗಿಯಾಗಿರುವ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗು ಮುಖಂಡ ಗಳ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂಬುದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.






