ಕರ್ನಾಟಕ :ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಮೋಹನ್ ರಾವ್ ನಲವಾಡೆ,ಅವರಿಂದು ರಾಯಚೂರು ತಾಲೂಕಿನ ಶಕ್ತಿನಗದ ಕೃಷ್ಣ ಗೆಸ್ಟ್ ಹೌಸ್ ನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ನವದೆಹಲಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ.ಇಂದಿನ ದಿನಮಾನಗಳಲ್ಲಿ ರಾಜಕೀಯ ವ್ಯವಸ್ಥೆ ಹದಗೆಟ್ಟಿದ್ದು ಭ್ರಷ್ಟಾಚಾರ ತಾಂಡವಾಡುತ್ತಿದೆ.

ಅನೇಕರಲ್ಲಿ ಕಾನೂನಿನ ಅರಿವು ಇಲ್ಲದ ಕಾರಣ ಸೌಲಭ್ಯ ಪಡೆಯಲು ಆಗುತ್ತಿಲ್ಲ. ನಾಗರಿಕರು ಕಾನೂನಿನ ಜ್ಞಾನ ಪಡೆದು ಸೌಲಭ್ಯ ಪಡೆಯಬೇಕು ಎಂದು ಕಿವಿಮಾತು ಹೇಳಿದರು. ಸಮಾಜದಲ್ಲಿ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಧಾವಿಸಿ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಜಿಲ್ಲಾಧ್ಯಕ್ಷರದ ಸಾದಿಕ್ ತಾತಾ ಸುಲ್ತಾನಪುರ ಸಂಸ್ಥೆಯಿಂದ ಅರಿವು, ನೆರವು ಹಾಗೂ ರಕ್ಷಣೆಯ ಧ್ಯಯವಾಕ್ಯದಡಿ ದೀನ ದಲಿತರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ಸಾಂತ್ವಾನ ಹೇಳಿ ನ್ಯಾಯ ಒದಗಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸದಸ್ಯರಿಗೆ ಪ್ರಶಸ್ತಿ, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ರಜಿಯಾ ಮಹೆಮೂದ್, ಪೊಲಿಸ್ ವಿಂಗ್ ಸದಸ್ಯೆ ಗಿರಿಜಾ ದೇವಿ, ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ ತಾಲೂಕು ಅಧ್ಯಕ್ಷ ಎಂ.ಜಿ ಶಾಹೀದ್, ತಾಲೂಕು ಉಪಾದ್ಯಕ್ಷ ಎಂ.ಡಿ.ಎಜಾಜ್, ನರಸಿಂಹಲು, ನಿಂಗಪ್ಪ, ಮಹೆಬೂಬ್, ಮೊಯಿನುದ್ದೀನ್, ನಿಜಾಮ್ ಮತ್ತಿತರರು ಉಪಸ್ಥಿತರಿದ್ದರು.






