ಕರ್ನಾಟಕ:ದಿನಾಂಕ 04-05-2022ರಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಜಸ್ಟಿಸ್ ಬಿ.ವೀರಪ್ಪನವರು ನೇತೃತ್ವದಲ್ಲಿ ,ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ನ್ಯಾಯಾಧೀಶರುಗಳಾದ ಎಚ್. ಶಶಿಧರ ಶೆಟ್ಟಿ ಅವರು ಮತ್ತು ತಂಡದ ವತಿಯಿಂದ ತುಮಕೂರು ಜಿಲ್ಲಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಸಾರ್ವಜನಿಕರ ಮತ್ತು ರೋಗಿಗಳ ಅಹವಾಲುಗಳನ್ನು ಆಲಿಸಿದರು ,ಹೊರರೋಗಿಗಳ ಮತ್ತು ಒಳರೋಗಿಗಳ ನ್ನು ಭೇಟಿ ಮಾಡಿ ಅವರ ಕಷ್ಟ ಸುಖಗಳನ್ನು ಆಲಿಸಿ ವೈದ್ಯರು ಸರಿಯಾಗಿ ರೋಗಿಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಕೇಳಿದರು .

ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವಿಚಾರಿಸಿದರು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಹಾವು ಕಚ್ಚಿದವರು ,ಬಾಣಂತಿಯರು ,ಸಕ್ಕರೆ ಕಾಯಿಲೆ ,ಜಾಂಡೀಸ್ನಿಂದ ಬಳಲುತ್ತಿರುವ ಚಿಕ್ಕ ಮಕ್ಕಳು ರಕ್ತ ಇಲ್ಲದವರು ಹಲವು ಕಾಯಿಲೆಗಳಿಂದ ಬಳಲುತ್ತಿರುವವರು ,ಕಣ್ಣಿನ ಚಿಕಿತ್ಸೆ ಪಡೆಯುತ್ತಿರುವವರು ಎಲ್ಲರನ್ನೂ ಭೇಟಿ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದರು .
ಇದರ ನಂತರ ತುಮಕೂರು ಜಿಲ್ಲಾ ಜೈಲಿಗೆ ಭೇಟಿ ನೀಡಿ ನ್ಯಾಯಾಧೀಶರು ಜೈಲಿನಲ್ಲಿರುವ ಕೈದಿಗಳ ಕಷ್ಟಸುಖಗಳನ್ನು ವಿಚಾರಿಸಿದರು .ಕೈದಿಗಳಿಗೆ ಕಾನೂನು ಸೇವೆ ಗಳ ಅವಶ್ಯಕತೆ ಇದೆಯೇ ಎಂದು ವಿಚಾರಿಸಿದರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಉಚಿತವಾಗಿ ವಕೀಲರ ನೀಡುವುದಾಗಿ ಭರವಸೆ ನೀಡಿದರು .

ಜೈಲಿನಲ್ಲಿರುವ ಕೈದಿಗಳಿಗೆ ನೀಡುವ ಊಟ ಉಪಚಾರವನ್ನು ನ್ಯಾಯಮೂರ್ತಿಗಳು ಸೇವಿಸಿ ಅದರ ಗುಣಮಟ್ಟವನ್ನು ಪರಿಶೀಲಿಸಿದರು .
ಈ ಸಂದರ್ಭದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಚ್ ಶಶಿಧರ ಶೆಟ್ಟಿ ,ಜೈಲು ಸೂಪರಿಂಟೆಂಡೆಂಟ್ ಶಾಂತಶ್ರೀ ,ನ್ಯಾಯಾಧೀಶರುಗಳಾದ ಡಿ. ಟಿ. ಪುಟ್ಟರಂಗ ಸ್ವಾಮಿ ,ಶ್ರೀಮತಿ ಜೈಬುನ್ನಿಸಾ ,ಡಿ ಎಲ್ ಎಸ್ ಎ ಆಡಳಿತಾಧಿಕಾರಿ ನರಸಿಂಹಪ್ಪ ,ಜಿಲ್ಲಾ ಶಸ್ತ್ರ ಚಿಕಿತ್ಸಕ ಟಿ. ಎ. ವೀರಭದ್ರಯ್ಯ ಮುಂತಾದವರು ಉಪಸ್ಥಿತರಿದ್ದರು .







