ದೂರಿನ ಆಧಾರದ ಮೇಲೆ ನಡೆದ ತನಿಕೆಯಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಡೇಟಾ ಸೆಂಟರ್ ನಿಂದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಇನ್ನು ಇಬ್ಬರು ಆರೋಪಿಗಳು ಪ್ರಸ್ತುತ ವಿದೇಶದಲ್ಲಿದ್ದು ಅವರುಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ
ವೊಡಾಫೋನ್ ಲಿಮಿಟೆಡ್ನ ನೊಂದಣಿ ಅಧಿಕಾರಿ ಒಬ್ಬರು ಸೈಬರ್ ಕ್ರೈಂ ಪೊಲೀಸ್ ಠಾಣೆ ಸಿ ಓ ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದು ದೂರಲ್ಲಿ ಗ್ಲೀಮ್ ಗ್ಲೋಬಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಸಿಮ್ ಗಳನ್ನು ಖರೀದಿಸಿ ಅವುಗಳನ್ನು ಬೆಂಗಳೂರಿನ ವೈಟ್ ಫೀಲ್ಡ್ ನ ಐರನ್ ಮೌಂಟನ್ ಡೇಟಾ ಸೆಂಟರ್ ನಲ್ಲಿ ಅಕ್ರಮವಾಗಿ ಅಳವಡಿಸಿದ್ದಲ್ಲಿ ಬಳಸಲಾಗುತ್ತಿದೆ ಎಂದು ತಿಳಿಸಿದ್ದರು ಈ ಕ್ರಿಯೆಯಲ್ಲಿ ಅಂತಾರಾಷ್ಟ್ರೀಯ ಕರೆಗಳನ್ನು ಅಕ್ರಮವಾಗಿ ಸ್ಥಳೀಯ ಕರೆಗಳಾಗಿ ಪರಿವರ್ತಿಸಲಾಗುತ್ತಿದ್ದು ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡುವುದರ ಜೊತೆಗೆ ಸರ್ಕಾರ ಹಾಗೂ ಟೆಲಿಕಾಂ ಸಂಸ್ಥೆಗೆ ಹಾರ್ದಿಕ ನಷ್ಟ ಉಂಟು ಮಾಡುತ್ತದೆ.
ಪಿರಿಯಾದುದಾರ ದೂರಿನ ಆಧಾರದ ಮೇಲೆ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ವಿವಿದಾಯಾಮಗಳಲ್ಲಿ ತನಿಖೆ ನಡೆಸಿ ಆಗಸ್ಟ್ ನಾಲ್ಕರಂದು ಇದೇ ರೀತಿಯ ಇಂದಿನ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಒಬ್ಬ ಶಂಕಿತನನ್ನು ನ್ಯಾಯಾಲಯದ ಆದೇಶದಂತೆ ಏಳು ದಿನಗಳ ಪೊಲೀಸ್ ಪಡೆದು ತನಿಖೆಯನ್ನು ಮುಂದುವರಿಸಿ ತನಿಖೆಯ ವೇಳೆ ಆರೋಪಿಯು ಡೇಟಾ ಸೆಂಟರ್ ನಲ್ಲಿ ಸಿಮ್ ಬಾಕ್ಸ್ ಮೂಲಸೌಕರ್ಯವನ್ನು ಅಳವಡಿಸಿರುವುದಾಗಿ ಒಪ್ಪಿಕೊಂಡಿರುತ್ತಾನೆ ಹಾಗೂ ಮತ್ತೊಬ್ಬರು ಆರೋಪಿಗಳು ವಿದೇಶದಲ್ಲಿದ್ದು ಆತನ ಸಂಪರ್ಕದಲ್ಲಿರುವುದಾಗಿ ತಿಳಿಸಿರುತ್ತಾನೆ, ವಿದೇಶದಲ್ಲಿರುವ ಇಬ್ಬರ ಮಾರ್ಗದರ್ಶನದಂತೆ vodafone ನಿಂದ ಸಿಮ್ ಗಳನ್ನು ಖರೀದಿಸಿ ನಕಲಿ ಕಂಪನಿಗಳ ಹೆಸರಿನಲ್ಲಿ IPBX ಸರ್ವರ್ ಗಳು ಹಾಗೂ ಸಿಮ್ ಬಾಕ್ಸ್ಗಳನ್ನು ಅಳವಡಿಸಿದ್ದಾಗಿ ತಿಳಿಸಿರುತ್ತಾನೆ
ಆರೋಗ್ಯ ಮಾಹಿತಿ ಆಧಾರದ ಮೇಲೆ ಡೇಟಾ ಸೆಂಟರ್ ನಲ್ಲಿ ಶೋಧ ನಡೆಸಿ ಆರು ಸಿಮ್ ಬಾಕ್ಸ್ ಗಳು 133 ಸಿಮ್ ಕಾರ್ಡ್ ಗಳು 12 ಡೇಟಾ ಸ್ಟೋರೇಜ್ ಸರ್ವರ್ ಗಳು ಅಪ್ಲಿಕೇಶನ್ ಮತ್ತು ಒಂದು ನೆಟ್ವರ್ಕ್ ರೂಟರ್ ಹಾಗೂ ಇತರೆ ಸಂಬಂಧಿತ ಉಪಕರಣಗಳನ್ನು ವಿಷಪಡಿಸಿಕೊಳ್ಳಲಾಯಿತು ವಶಪಡಿಸಿಕೊಂಡ ವಸ್ತುಗಳ ಅಂದಾಜು ಮೌಲ್ಯ 10 ಲಕ್ಷ ರೂಪಾಯಿಗಳಾಗಿರುತ್ತದೆ
ತನಿಕೆಯಿಂದ ವಶಪಡಿಸಿಕೊಂಡ ಸಿಂಹಗಳನ್ನು ಇತರ ಸೈಬರ್ ಅಪರಾಧಗಳಲ್ಲಿ ಬಳಸಿರುವ ಸಾಧ್ಯತೆ ಕಂಡು ಬಂದಿದ್ದು ಸಿಮ್ ಬಾಕ್ಸ್ ಇತರ ಯಾವುದೇ ಸೈಬರ್ ಅಪರಾಧಿಗಳಿಗೆ ಬಳಸಿದ್ದಾರೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ ಮತ್ತೆ ಇಬ್ಬರ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿರುತ್ತದೆ
ನಗರ ಪೊಲೀಸ್ ಆಯುಕ್ತರು ಹಾಗೂ ಜಂಟಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಅಕ್ರಮ ಸಿಮ್ ಬಾಕ್ಸ್ ಮೂಲಸೌಕರ್ಯವನ್ನು ಪತ್ತೆ ಹಚ್ಚುವ ಸಲುವಾಗಿ ಸಿಸಿಬಿ ಹಾಗೂ ಸಿಸಿಪಿಎಸ್ ಅಧಿಕಾರಿಗಳ ತಂಡವನ್ನು ನಿಯೋಜಿಸಿದ್ದು ಬೆಂಗಳೂರು ನಗರದ ಎಲ್ಲಾ ಡೇಟಾ ಸೆಂಟರ್ಗಳು ತಮ್ಮಲ್ಲಿ ಅಳವಡಿಸಲ್ಪಡುವ ಮೂಲ ಸೌಕರ್ಯವನ್ನು ಸೂಕ್ತವಾಗಿ ಪರಿಶೀಲಿಸಿ ಅಕ್ರಮ ಸಿಮ್ ಬಾಕ್ಸ್ ಗಳು ಕಂಡು ಬಂದಲ್ಲಿ ತಕ್ಷಣ ಬೆಂಗಳೂರು ನಗರ ಪೊಲೀಸರಿಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.






