HomeAnti Corruption Tvಜುಲೈ 8ರಂದು ಬಿಬಿಎಂಪಿ ಮತ್ತು 10ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರು ಸಾಮೂಹಿಕ ರಜೆ ಹಾಕಿ...

ಜುಲೈ 8ರಂದು ಬಿಬಿಎಂಪಿ ಮತ್ತು 10ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ

- Advertisement -spot_img

ಹೋರಾಟಕ್ಕೆ ಪೌರ ಕಾರ್ಮಿಕರ ಸಂಘಟನೆಗಳ ಬೆಂಬಲ

ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭವೃದ್ದಿ ಸಂಘ ಮತ್ತು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು ವತಿಯಿಂದ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಜುಲೈ 8ರಂದು ಫೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದರ ಕುರಿತು ಬಿಬಿಎಂಪಿ ನೌಕರರ ಭವನದಲ್ಲಿ ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್ ರವರು ಸಂಘದ ಪದಾಧಿಕಾರಿಗಳು, ಸದಸ್ಯರ ಪೂರ್ವಭಾವಿ ಸಭೆ

ಇದೇ ಸಂದರ್ಭದಲ್ಲಿ ಎ.ಅಮೃತ್ ರಾಜ್ ರವರು ಮಾತನಾಡಿ ಬಿಬಿಎಂಪಿಯಲ್ಲಿ 12ಬೇಡಿಕೆ ಮತ್ತು 10ಮಹಾನಗರ ಪಾಲಿಕೆಯ 6ಬೇಡಿಕೆಗಳ ಈಡೇರಿಕೆಗಾಗಿ ಬಿಬಿಎಂಪಿ ಮತ್ತು 10ಮಹಾನಗರ ಪಾಲಿಕೆಯ ಅಧಿಕಾರಿ, ನೌಕರರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ಮಾಡಲಿದ್ದೇವೆ.

ಕಛೇರಿ ಮತ್ತು ಹೊರಗಡೆ ಕೆಲಸ ನಿರ್ವಹಿಸುತ್ತಿರುವುದರಿಂದ ಲಾಫ್ ಆಫ್ ಪದ್ದತಿ ಬಿಡಬೇಕು, 6000ಅಧಿಕಾರಿ ಸಿಬ್ಬಂದಿಗಳ ಕೊರತೆ ಇದೆ ಕೊರತೆ ಭರ್ತಿ ಮಾಡಬೇಕು ಹಾಗೂ
ವಿದ್ಯಾ ಇಲಾಖೆ ಪ್ರಾಂಶುಪಾಲರು,ಮುಖ್ಯೋಪಾಧ್ಯಯರು ಮೇಲಿನ ಇಲಾಖೆ ವಿಚಾರಣೆ ಕೈಬಿಡಬೇಕು.

ಸಹಾಯಕ ಕಾರ್ಯಪಾಲಕ, ಕಾರ್ಯಪಾಲಕ ಅಭಿಯಂತರುಗಳಗೆ ಮುಂಬಡ್ತಿ ನೀಡಬೇಕು, ಇ-ಆಸ್ತಿ ನೋಂದಾಣೆ ಪದ್ದತಿ ಈ ಹಿಂದೆ ಇರುವ ನಿಯಮದಂತೆ ಮುಂದುವರೆಸಬೇಕು.

ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಆರೋಗ್ಯ ಸೌಲಭ್ಯ ಪಾಲಿಕೆ ನೌಕರರಿಗೆ ಯೋಜನೆ ಜಾರಿಯಾಗಬೇಕು, ಎರವಲು ಸೇವೆ ಅಧಿಕಾರಿಗಳು ಮಾತೃ ಇಲಾಖೆಗೆ ವರ್ಗಾವಣೆ ಮಾಡಬೇಕು.

ನೌಕರರ ಜೇಷ್ಠತಾ ಪಟ್ಟಿ ಅಂತಿಮಗೊಳಿಸಬೇಕು.ಹೆಲ್ತ್ ಸೂಪರ್ ವೈಸರ್ ಗಳಿಗೆ ವಾಣಿಜ್ಯ ಪರವಾನಗಿ ನೀಡುವ ಅಧಿಕಾರ ನೀಡಬೇಕು, ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಮಾರ್ಷಲ್ ಗಳನ್ನು ರದ್ದುಪಡಿಸಬೇಕು.

7ನೇ ವೇತನ ಆಯೋಗದ ಮಹಾನಗರ ಪಾಲಿಕೆ ನೌಕರರಿಗೆ ವಿಸ್ತರಣೆ, ವೃಂದ ಮತ್ತು ನೇಮಕಾತಿಯಲ್ಲಿ ತಿದ್ದುಪಡಿ ಹಾಗೂ ಕೆಜಿಐಡಿ ಮತ್ತು ಜಿಪಿಎಫ್ ಸೌಲಭ್ಯ ಹಾಗೂ ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಾಗಬೇಕು. ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರಿಗೆ ಪ್ರತಿವರ್ಷ ಕ್ರೀಡಾಕೂಟ ಆಯೋಜನೆ ಮಾಡಬೇಕು. ಮಹಾನಗರ ಪಾಲಿಕೆಯಲ್ಲಿ ಹಲವಾರು ವರ್ಷಗಳಿಂದ ಮುಂಬಡ್ತಿ ನೀಡಿಲ್ಲ ಇಷ್ಟು ಬೇಡಿಕೆ ಈಡೇರಿಕೆಗಾಗಿ ಬಿಬಿಎಂಪಿ ಮತ್ತು 10ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆಗಳ ಪೌರ ಕಾರ್ಮಿಕರ ಮಹಾಸಂಘ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ವಚ್ಚತಾ ಪೌರ ಕಾರ್ಮಿಕರ ಮಹಾಸಂಘವು ಸಂಪೂರ್ಣ ಬೆಂಬಲ ನೀಡಿದೆ

ಉಪಾಧ್ಯಕ್ಷರಾದ ಕೆ.ಜಿ.ರವಿ ಮತ್ತು ಸಾಯಿಶಂಕ‌ರ್, ಎಸ್.ಜಿ.ಸುರೇಶ್, ಎ.ಜೆ.ಬಾಬು, ಎಂ.ಎಲ್.ಎ.ಮಂಜುನಾಥ್, ರುದ್ರೇಶ್‌, ಸಂತೋಷ್ ಕುಮಾರ್ ನಾಯಕ್, ತಿಪ್ಪೇಶ್ ರವರು, ರೇಣುಕಾಂಬ, ಕೆ.ನರಸಿಂಹ, ಶ್ರೀಧ‌ರ್, ಹೆಚ್.ಬಿ.ಹರೀಶ್, ಮಾರ್ಕೆಟ್ ಮಂಜುನಾಥ್‌ ರವರು ಸದಸ್ಯರುಗಳು ಭಾಗವಹಿಸಿದ್ದರು.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here