HomeAnti Corruption Tvವಿಶ್ವ ಪರಿಸರ ದಿನಾಚರಣೆ, ಮಾಲಿನ್ಯ ಮುಕ್ತ ಭಾರತಕ್ಕೆ ಮುನ್ನುಡಿ

ವಿಶ್ವ ಪರಿಸರ ದಿನಾಚರಣೆ, ಮಾಲಿನ್ಯ ಮುಕ್ತ ಭಾರತಕ್ಕೆ ಮುನ್ನುಡಿ

- Advertisement -spot_img

ಬೆಂಗಳೂರು ನಗರದ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ನಗರ, ವಕೀಲರ ಸಂಘ, ಬೆಂಗಳೂರು ಹಾಗೂ ತೋಟಗಾರಿಕೆ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಪರಿಸರ ದಿನಾಚರಣೆ” ಯನ್ನು ಆಚರಿಸಲಾಯಿತು. “ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು” ಎಂಬ ಘೋಷವಾಕ್ಯವು ಸಮಾಜದ ಭವಿಷ್ಯದ ದೃಷ್ಟಿಯೆಡೆಗೆ ಗಮನ ಸೆಳೆಯಿತು.

ದಿನಾಂಕ 05.06.2025 ರ ಗುರುವಾರ ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಬೆಳಗ್ಗೆ 10:45 ಕ್ಕೆ ಈ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ನ್ಯಾಯಾಲಯದ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಯಿತು.

ಗೌರವಾನ್ವಿತ ಅತಿಥಿಗಳಾಗಿ ಶ್ರೀ. ನ್ಯಾಯಾಧೀಶರಾದ ಶ್ರೀ. ಸಂತೋಷ್ ಗಜಾನನ್ ಭಟ್, ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ನ್ಯಾಯಾಧೀಶರಾದ ಶ್ರೀ. ಹೆಚ್. ಶಶಿಧರ ಶೆಟ್ಟಿ, ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಶ್ರೀಮತಿ. ಕುಸುಮ, ತೋಟಗಾರಿಕೆ ಉಪ ನಿರ್ದೇಶಕರು, ಕಬ್ಬನ್ ಉದ್ಯಾನವನ, ಬೆಂಗಳೂರು, ಶ್ರೀ. ವಿವೇಕ್ ಸುಬ್ಬಾರೆಡ್ಡಿ, ಅಧ್ಯಕ್ಷರು, ವಕೀಲರ ಸಂಘ, ಬೆಂಗಳೂರು, ಶ್ರೀ. ಗಿರೀಶ್ ಕುಮಾರ್ ಸಿ. ಎಸ್., ಉಪಾಧ್ಯಕ್ಷರು, ವಕೀಲರ ಸಂಘ, ಬೆಂಗಳೂರು, ಶ್ರೀ. ಪ್ರವೀಣ್ ಗೌಡ ಎಚ್. ಎ., ಪ್ರಧಾನ ಕಾರ್ಯದರ್ಶಿಗಳು, ವಕೀಲರ ಸಂಘ, ಬೆಂಗಳೂರು, ಹಾಗೂ ಶ್ರೀ. ಪರಮೇಶ್ವರ ಪಿ. ಎಚ್., ವಿಲೇಖಾನಾಧಿಕಾರಿಗಳು, ನಗರ ಸಿವಿಲ್ ನ್ಯಾಯಾಲಯ, ಬೆಂಗಳೂರು, ಮುಂತಾದ ಗಣ್ಯರು ಉಪಸ್ಥಿತರಿದ್ದರು. ಶ್ರೀ. ವರದರಾಜ್ ಬಿ., ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ನಗರ ಅವರು ಸ್ವಾಗತ ಕೋರಿದರು.

ಈ ಕಾರ್ಯಕ್ರಮವು ಪರಿಸರ ಜಾಗೃತಿ ಮೂಡಿಸುವಲ್ಲಿ ಮತ್ತು ಸಾರ್ವಜನಿಕರನ್ನು ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿತು.

 

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here