HomeAnti Corruption Tvಹಕ್ಕಿನ ದುರುಪಯೋಗ, ಸುಳ್ಳು ಕೇಸ್ ದಾಖಲಿಸಿದ್ದವರಿಗೆ ಶಿಕ್ಷೆ

ಹಕ್ಕಿನ ದುರುಪಯೋಗ, ಸುಳ್ಳು ಕೇಸ್ ದಾಖಲಿಸಿದ್ದವರಿಗೆ ಶಿಕ್ಷೆ

- Advertisement -spot_img

ಸಂವಿಧಾನದಲ್ಲಿ ಯಾವುದೇ ವ್ಯಕ್ತಿಗೆ ತೊಂದರೆಯಾದರೆ ನ್ಯಾಯಕ್ಕಾಗಿ ಪೊಲೀಸರ ಬಳಿ ದೂರನ್ನು ದಾಖಲಿಸಿ ತಮ್ಮ ಹಕ್ಕನ್ನು ಚಲಾಯಿಸುವುದಕ್ಕೆ ಅವಕಾಶ ನೀಡಿದೆ. ಇಂತಹ ಹಕ್ಕನ್ನು ದುರುಪಯೋಗಪಡಿಸಿಕೊಂಡ ಇಬ್ಬರಿಗೆ ನ್ಯಾಯಾಲಯವು ಶಿಕ್ಷೆಯನ್ನು ನೀಡಿರುವಂತಹ ಸಂಗತಿ ಬೆಂಗಳೂರು ನಗರದಲ್ಲಿ ನಡೆದಿದೆ.

ಬೆಂಗಳೂರು ನಗರದಲ್ಲಿ ಕಳೆದ 5ವರ್ಷಗಳಿಂದ 6 ಸುಳ್ಳು ಕೇಸ್ ದಾಖಲಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸುಳ್ಳು ಕೇಸ್ ದಾಖಲಿಸಿದ ಪ್ರಜೆಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು, ಪೊಲೀಸರು 4 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದೀಗ ವಿಚಾರಣೆ ನಡೆಸಿದ 2 ಪ್ರಕರಣಗಳಲ್ಲಿ ನ್ಯಾಯಾಲಯ ತೀರ್ಪನ್ನು ನೀಡಿದೆ.

ಹಲ್ಲೆ ಪ್ರಕರಣ ಒಂದರಲ್ಲಿ ತನಿಖೆ ನಡೆಸಿದ ಸಂಪಿಗೆಹಳ್ಳಿ ಪೊಲೀಸರು ಸುಳ್ಳು ದೂರು ಎಂದು ತಿಳಿದಾಗ, ದೂರುದಾರನ ವಿರುದ್ಧವೇ ಪ್ರಕರಣ ದಾಖಲಿಸಿದ್ದರು. ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಗೆ 500 ರೂಪಾಯಿಗಳ ತಂಡ ಅಥವಾ 5 ದಿನಗಳ ಸಾದಾ ಶಿಕ್ಷೆಯನ್ನು ವಿಧಿಸಿದೆ.

ನಗರದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಕಳವು ಪ್ರಕರಣದ ದೂರುದಾರರು ಮಾಡಿದ ಆರೋಪ ನಕಲಿಯಾಗಿತ್ತು. ಸುಳ್ಳು ದೂರು ನೀಡಿರುವುದು ಖಚಿತವಾಗಿದ್ದು, ನ್ಯಾಯಾಲಯವು 100 ರೂಪಾಯಿಗಳ ದಂಡ ಅಥವಾ 5 ದಿನಗಳ ಸಾದಾ ಶಿಕ್ಷೆಯನ್ನು ನೀಡಿದೆ.

ಸಂತ್ರಸ್ತರು ನ್ಯಾಯಕ್ಕಾಗಿ ದೂರು ನೀಡಬೇಕು. ಆದರೆ ಸ್ವತಹ ತಾನೇ ಆರೋಪಿಯಾಗಿದ್ದು ಸುಳ್ಳು ದೂರುಗಳನ್ನು ನೀಡಿ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದ್ದು ಹಾಗೂ ನ್ಯಾಯಾಲಯದ ಸಮಯಕ್ಕೆ ತೊಂದರೆ ನೀಡಿದ್ದಕ್ಕಾಗಿ ಈ ರೀತಿಯ ಶಿಕ್ಷೆಗಳನ್ನು ವಿಧಿಸಲಾಗುವುದು.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here