HomeAnti Corruption Tvನಕಲಿ ಹಾಲು 20 ವರ್ಷಗಳಿಂದ ತಯಾರಿಸಿ ಮಾರಾಟ

ನಕಲಿ ಹಾಲು 20 ವರ್ಷಗಳಿಂದ ತಯಾರಿಸಿ ಮಾರಾಟ

- Advertisement -spot_img

ಕೇವಲ ಒಂದು ಲೀಟರ್ ಕೆಮಿಕಲ್ ನಿಂದ ಬರೋಬ್ಬರಿ 500 ಲೀಟರ್ ಹಾಲನ್ನು ತಯಾರಿಸುವಂತಹ ಬೆಚ್ಚುಗೊಳಿಸುವ ವಿಡಿಯೋ ಇದಾಗಿದೆ.

ಉದ್ಯಮಿಯೊಬ್ಬ ಒಂದು ಲೀಟರ್ ರಾಸಾಯನಿಕರಿಂದ 500 ಲೀಟರ್ ಹಾಲನ್ನು ತಯಾರಿಸುತ್ತಿದ್ದಾನೆ. ಕಳೆದ 20 ವರ್ಷಗಳಿಂದ ಇದೇ ವಿಷವನ್ನು ಅವನು ಸರಬರಾಜು ಮಾಡುತ್ತಿರುವುದಾಗಿ ಇದೀಗ ಬಯಲುಗೊಂಡಿದೆ.

FSSAI ಅಧಿಕಾರಿಗಳ ಪ್ರಕಾರ ಹಾಲು, ಹಾಲಿನ ಉತ್ಪನ್ನ ಮಾರಾಟ ಮಾಡುತ್ತಿದ್ದ ಉದ್ಯಮಿ ಅಗರ್ವಾಲ್, ನಿಜವಾದ ಹಾಲಿನಂತೆ ಕಾಣುವಂತೆ ರಾಸಾಯನಿಕ ಬಳಸಿ ಕೃತಕ, ಸಿಹಿ ಕಾರಕ ಸುವಾಸನೆ ಬೆರೆಸುತ್ತಿದ್ದನಂತೆ. ಈ ನಕಲಿ ಹಾಲು 20 ವರ್ಷಗಳಿಂದ ತಯಾರಿಸಿ ಮಾರಾಟ ಮಾಡುತ್ತಿದ್ದನಂತೆ. ನಿಜವಾದ ಹಾಲಿನ ರುಚಿ ಬರುವಂತೆ ರಾಸಾಯನಿಕ ಬಳಸಲಾಗುತ್ತಿದ್ದನಂತೆ. ಅಗರ್ವಾಲ್ಗೆ ಸೇರಿದ ಅಂಗಡಿ ಮತ್ತು 4 ಗೋಡೌನ್ಗಳ ಮೇಲೆ ದಾಳಿ ನಡೆಸಿ ನಕಲಿ ಹಾಲು ತಯಾರಿಸಲು ಬಳಸುತ್ತಿದ್ದ ರಾಸಾಯನಿಕ ವಶಪಡಿಸಿಕೊಂಡಿದ್ದಾರೆ. ಈ ಕೃತಕ ಹಾಲು ನಿಜವಾದ ಹಾಲಿಗಿಂತಲೂ ಏನೂ ಕಡಿಮೆ ಇಲ್ಲ ಅಂತಾರೆ ಅಧಿಕಾರಿಗಳು. ಹಾಲಿನ ಬಣ್ಣ, ರುಚಿ, ಸುವಾಸನೆ ನಿಜವಾದ ಹಾಲನ್ನೂ ಮೀರಿಸುವಂತಿದೆ ಅಂತೆ!!

ಸದ್ಯ ಈ ಗ್ಯಾಂಗ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಈತನ ಈ ವಿಷಪೂರಿತ ದ್ರವ್ಯ ಕುಡಿದವರ ಗತಿಯೇನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here