ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರ್ಗಿಯಲ್ಲಿ ದೀಪಾವಳಿ ಪ್ರಯುಕ್ತ
ಸಂತ ಶ್ರೀ ಆಶಾರಾಮಜೀ ಬಾಪುರವರ ಆಶ್ರಮದಲ್ಲಿ ಸತ್ಸಂಗ ನಡೆಯಿತು.
ಕಲಬುರಗಿ ಮೋಹನ್ ಲಾಡ್ಜ್ ಎದುರುಗಡೆ ಕೇಂದ್ರಿಯ ಬಸ್ ನಿಲ್ದಾಣ ರಸ್ತೆ ಯ ಲ್ಲಿ ಶ್ರೀ ಯೋಗ ವೇದಾಂತ ಸೇವಾ ಸಮಿತಿಯ ವತಿಯಿಂದ ಬೆಳಕಿನ ಹಬ್ಬವಾದ ದೀಪಾವಳಿಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು . ಸಂತ ಶ್ರೀ ಆಶಾರಾಮಜೀ ರವರ ಪಾವನ ಪ್ರೇರಣೆಯಿಂದ ಪ್ರತಿ ವರ್ಷ ಭಾರತದಲ್ಲಿರುವ ಎಲ್ಲಾ ಬಾಪೂಜೀರವರ ಆಶ್ರಮದಲ್ಲಿ ಬಡವರಿಗೆ, ಅಸಹಾಯಕರಿಗೆ, ಹಿಂದುಳಿದ ಬುಡಕಟ್ಟು ಹಾಗು ಆದಿವಾಸಿ ಜನರಿಗೆ ಬೆಳಕಿನ ಹಬ್ಬ ದೀಪಾವಳಿಯ ನಿಮಿತ್ಯ ದಿನೋಪಯೋಗಿ ವಸ್ತುಗಳಾದ ದವಸ ಧಾನ್ಯ. ಬಟ್ಟೆ, ಪಾತ್ರೆಗಳು, ಹಾಸಿಗೆ, ದೀಪಗಳು ಮತ್ತು ಸಿಹಿ ತಿಂಡಿಗಳ ವಿತರಣೆ ಮಾಡುತ್ತಾ ಬಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಡವರಿಗೆ ದಿನನಿತ್ಯದ ವಸ್ತುಗಳನ್ನು ಒದಗಿಸಿ, ಅವರಿಂದ ಭಜನೆ ಕೀರ್ತನೆ ಮಾಡಿಸಿ ಅವರಿಗಾಗಿ ಸತ್ಸಂಗ, ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಯಿತು . ಈ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷರಾದ ಶ್ರೀ ಎಸ್. ವೈ ಪಾಟೀಲ, ಶ್ರೀ ಎಮ್ ಕೆ ಪಾಟೀಲ್ ಅದರ ಪೂರ್ವಕವಾಗಿ ವಿನಂತಿಸಿದರು.
ಈ ಕಾರ್ಯಕ್ರಮದ ಮೂಲ ಉದ್ದೇಶವೆಂದರೆ ಪ್ರತಿ ಬಡವರು ಸಂತೋಷದಿಂದ ದೀಪಾವಳಿ ಹಬ್ಬವನ್ನು ಆಚರಿಸಿ ಸಂತೃಪ್ತರಾಗಿರಲಿ, ಪ್ರತಿ ಬಡವರ, ಅಸಹಾಯಕರ ಮನೆಗಳಲ್ಲಿಯೂ ದೀಪಗಳು ಬೆಳಗುವಂತೆ ಮಾಡಿ ಕೋಡಲು ಅನುವು ಮಾಡುವುದು ಹಾಗೂ ದಾನ ಧರ್ಮಗಳನ್ನು ಮಾಡಿ ಅವರಲ್ಲಿ ವಾಸವಾಗಿರುವ ಭಗವಂತನನ್ನು ಪ್ರಸನ್ನ ಪಡಿಸಿ ಪರಮಾತ್ಮನ ಆರ್ಶಿವಾದ ಪಡೆದು ಜೀವನ ಪಾವನ ಮಾಡಿಕೊಳ್ಳುವುದಾಗಿದೆ.
ಎಂದು
ಅಧ್ಯಕ್ಷರು ಶರಣಕುಮಾರ್ ಸ್ವಾಮಿ ಶ್ರೀ ಯೋಗ ವೇದಾಂತ ಸೇವಾ ಸಮಿತಿ, ಕಲಬುರಗಿ ತಿಳಿಸದರು.
ವರದಿ ರಾಜಕುಮಾರ್ ಕಲಬುರಗಿ ಜಿಲ್ಲಾ ವರದಿಗಾರರು






