HomeAnti Corruption Tvರಾಷ್ಟ್ರೀಯ ಹೆದ್ದಾರಿಯಲ್ಲಿ 2.5 ಕೆಜಿ ಚಿನ್ನ ದರೋಡೆ!

ರಾಷ್ಟ್ರೀಯ ಹೆದ್ದಾರಿಯಲ್ಲಿ 2.5 ಕೆಜಿ ಚಿನ್ನ ದರೋಡೆ!

- Advertisement -spot_img

ರಾಷ್ಟ್ರೀಯ ಹೆದ್ದಾರಿ ಕಾರೊಂದನ್ನು ತಡೆದ ದುಷ್ಕರ್ಮಿಗಳು ಅದರಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 2.5 ಕೆಜಿ ತೂಕದ ಚಿನ್ನವನ್ನು ದರೋಡೆ ಮಾಡಿದ್ದಾರೆ. ಕೇರಳದ ತ್ರಿಶೂರ್‌ ಬಳಿಯ ಪೀಚಿ ಎಂಬಲ್ಲಿ ಈ ಘಟನೆ ನಡೆದಿದೆ. ಮೂರು ಕಾರುಗಳಲ್ಲಿ ಬಂದ 12 ಜನ ದರೋಡೆಕೋರರು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ, ಚಿನ್ನವನ್ನು ದೋಚಿದ್ದಾರೆ.
ಎಸ್‌ಯುವಿ ಕಾರಿನಲ್ಲಿ ಚಿನ್ನ ಸಾಗಣೆ ಮಾಡಲಾಗುತ್ತಿತ್ತು. ಇದರ ಮಾಹಿತಿ ಅರಿತ ದರೋಡೆಕೋರರು ಹಾಡಹಗಲೇ ಅದೂ ಕೂಡಾ ರಾಷ್ಟ್ರೀಯ ಹೆದ್ದಾರಿಯಲ್ಲೇ ಮೂರು ಕಾರುಗಳಲ್ಲಿ ಬಂದು ಚಿನ್ನ ಸಾಗಿಸುತ್ತಿದ್ದ ಕಾರಿಗೆಎ ಅಡ್ಡ ಹಾಕಿದ್ದಾರೆ. 12 ದರೋಡೆಕೋರರು ಕಾರಿನಲ್ಲಿದ್ದವರಿಗೆ ಬೆದರಿಕೆ ಹಾಕಿ, ಅದರಲ್ಲಿದ್ದ ಚಿನ್ನವನ್ನು ದರೋಡೆ ಮಾಡಿದ್ದಾರೆ.ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಚಿನ್ನ ದರೋಡೆ ಮಾಡಲಾಗಿದೆ. ಈ ರಾಬರಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇನ್ನು ಕಾರಿನಲ್ಲಿದ್ದ ಇಬ್ಬರನ್ನು ಕೂಡಾ ಕಿಡ್ನ್ಯಾಪ್‌ ಮಾಡಲಾಗಿದೆ. ಚಿನ್ನ ಸಾಗಿಸುತ್ತಿದ್ದ ಕಾರು ನಿರ್ಮಾಣ ಹಂತದ ಫ್ಲೈಓವರ್‌ ಬಳಿ ಬಂದಾಗ ಅದನ್ನು ತಡೆದಿದ್ದಾರೆ.ಕೂಡಲೇ ಕೆಳಗಿಳಿದ ದರೋಡಕೋರರು ಕಾರಿನಲ್ಲಿದ್ದವರನ್ನು ಬೆದರಿಸಿ ಕಾರಿನ ಸಮೇತ ಚಿನ್ನವನ್ನು ಎತ್ತಿಕೊಂಡು ಹೋಗಿದ್ದಾರೆ. ಕಾರಿನಲ್ಲಿದ್ದವರನ್ನೂ ಕಿಡ್ನ್ಯಾಪ್‌ ಮಾಡಲಾಗಿದೆ. ಸೆಪ್ಟೆಂಬರ್‌ 22ರಂದು ಈ ಘಟನೆ ನಡೆದಿದೆ.ಈ ಬಗ್ಗೆ ಕೇಸ್‌ ದಾಖಲಾಗಿದ್ದು, ಪೊಲೀಸರು ಆರೋಪಿಗಳಾಗಿ ಹುಡುಕಾಟ ನಡೆಸಲಾಗುತ್ತಿದೆ. ಇನ್ನು ಚಿನ್ನ ಸಾಗಿಸುತ್ತಿದ್ದ ಕಾರಿನಲ್ಲಿದ್ದ ಇಬ್ಬರನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ ಚೆನ್ನಾಗಿ ಥಳಿಸಿ ಬಿಟ್ಟು ಕಳುಹಿಸಲಾಗಿದೆ.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here