HomeAnti Corruption Tvಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಕುಡಿದು ರಂಪಾಟ ಮಾಡಿದ ವೈದ್ಯ

ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಕುಡಿದು ರಂಪಾಟ ಮಾಡಿದ ವೈದ್ಯ

- Advertisement -spot_img

ಯುವ ವೈದ್ಯನೊಬ್ಬ ಕುಡಿದು ತೂರಾಡಿ ಬಟ್ಟೆ ಎಲ್ಲಾ ಗಲೀಜು ಮಾಡಿಕೊಂಡು ಹಾಗೆಯೇ ಕೆಲಸಕ್ಕೆ ಬಂದಿದ್ದಾನೆ. ಬಟ್ಟೆ ಕೊಳೆ ಮಾಡಿದ್ದಕೊಂಡಿದ್ದ ಖಾಸಗಿ ಆಸ್ಪತ್ರೆ ಡ್ಯೂಟಿ ಡಾಕ್ಟರ್‌ ಹಾಗೆಯೇ ಕೆಲಸಕ್ಕೆ ಹಾಜರಾಗಿದ್ದು, ರೋಗಿಗಳ ಕಡೆಯವರು ಆಕ್ರೋಶ ಹೊರಹಾಕಿದ್ದಾರೆ.

ರಾತ್ರಿ ವೇಳೆ ಕುಡಿದು ಟೈಟಾಗಿ ಬಂದ ವೈದ್ಯ ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಕೆಲಸಕ್ಕೆ ಹಾಜರಾಗಿದ್ದಾನೆ. ಎಲ್ಲಿಯೋ ಬಿದ್ದು ಬಟ್ಟೆ ಎಲ್ಲಾ ಸಂಪೂರ್ಣ ಕೆಸರಾಗಿದ್ದರೂ ವೈದ್ಯ ಹಾಗೆಯೇ ಆಸ್ಪತ್ರೆಗೆ ಬಂದಿದ್ದ. ಆಸ್ಪತ್ರೆ ಒಳಗೆ ಮೂಲೆಯಲ್ಲಿ ಆತ ಕುಳಿತಿದ್ದ.

ಅದನ್ನು ನೋಡಿದ ರೋಗಿಯೊಬ್ಬರ ಕಡೆಯವರು ಯಾರು ಆತ ಎಂದು ಸೆಕ್ಯೂರಿಟಿ ಗಾರ್ಡ್‌ನನ್ನು ಪ್ರಶ್ನೆ ಮಾಡಿದ್ದಾರೆ. ಆಗ ಸೆಕ್ಯೂರಿಟಿ ಗಾರ್ಡ್‌ ಅವರು ಡ್ಯೂಟಿ ಡಾಕ್ಟರ್‌ ಎಂದು ಹೇಳಿದ್ದಾನೆ.

ಆ ವಿಡಿಯೋ ರೆಕಾರ್ಡ್‌ ಆಗಿದ್ದು ಎಲ್ಲೆಡೆ ವೈರಲ್‌ ಆಗುತ್ತಿದೆ.
ರಾತ್ರಿ ಮಂಗಳೂರಿನಲ್ಲಿ ಮಳೆಯಾಗಿದ್ದು, ಮಳೆಯ ನಡುವೆ ಕುಡಿದು ಬಂದ ವೈದ್ಯ ಎಲ್ಲೋ ತೂರಾಡಿ ಬಿದ್ದಿದ್ದಾರೆ.. ಇದರಿಂದಾಗಿ ಅವರ ಬಟ್ಟೆಯೆಲ್ಲಾ ಕೊಳೆಯಾಗಿದೆ.

ಆದರೂ ಹಾಗೆಯೇ ಅವರು ಕೆಲಸಕ್ಕೆ ಹಾಜರಾಗಿದ್ದಾರೆ.ಇಂತಹವರು ಹೇಗೆ ಚಿಕಿತ್ಸೆ ಕೊಡುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.ಈ ಬಗ್ಗೆ ರೋಗಿಗಳ ಕಡೆಯವರು ತರಾಟೆಗೆ ತೆಗೆದುಕೊಂಡು ಘಟನೆ ಕೂಡಾ ನಡೆದಿದೆ.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here