HomeAnti Corruption Tvಅಂತರ ಶಾಲಾ ಒಲಂಪಿಕ್ ಕ್ರೀಡಾಕೂಟ ಉದ್ಘಾಟನೆ

ಅಂತರ ಶಾಲಾ ಒಲಂಪಿಕ್ ಕ್ರೀಡಾಕೂಟ ಉದ್ಘಾಟನೆ

- Advertisement -spot_img

ಮಕ್ಕಳ ಕ್ರೀಡಾಪ್ರತಿಭೆಗೆ ಸಹಕಾರ, ಪ್ರೋತ್ಸಹ ನೀಡುತ್ತಿರುವ ಬಾಂದವ ಸೇವಾ ಸಂಸ್ಥೆ

ಜಯನಗರ: ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ 16ನೇ ರಾಜ್ಯಮಟ್ಟದ ಅಂತರ ಶಾಲಾ ಒಲಂಪಿಕ್ ಕ್ರೀಡಾಕೂಟ ಆಯೋಜನೆ . ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು ಮತ್ತು ಮಾಜಿ ಶಾಸಕಿ ಸೌಮ್ಯರೆಡ್ಡಿ ಮತ್ತು ಆಡಳಿತ ಪಕ್ಷದ ಮಾಜಿ ನಾಯಕ, ಜಯನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎನ್.ನಾಗರಾಜುರವರು, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಯೋಜನೆ ಸಮಿತಿ ಅಧ್ಯಕ್ಷರಾದ ಪ್ರಮೋದ್ ಶ್ರೀನಿವಾಸ್ ರವರು ಶಾಲೆಯ ಒಲಂಪಿಕ್ ಸಂಸ್ಥೆ ಅಧ್ಯಕ್ಷರು ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಇದೇ ಸಂದರ್ಭದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿರವರು ಮಾತನಾಡಿ ಒಲಂಪಿಕ್ ಕ್ರೀಡಾಕೂಟ ಆರಂಭವಾಗಿದೆ, ನಮ್ಮ ದೇಶವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳು ಹೆಚ್ಚಿನ ಪದಕಗಳು ಗೆಲ್ಲಲಿ ಎಂದು ಶುಭಾ ಕೋರುತ್ತೇನೆ. ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡಾಚಟುವಟಿಕೆಗಳು ಜೀವನದಲ್ಲಿ ಆಳವಡಿಸಿಕೊಂಡರೆ ಮಾನಸಿಕ, ದೈಹಿಕವಾಗಿ ಆರೋಗ್ಯವಂತರಾಗಿ ಇರಬಹುದು. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಾಂದವ ಸಾಮಾಜಿಕ ಸೇವಾ ಸಂಸ್ಥೆಗೆ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಕ್ರೀಡೆಗಳಿಗೆ ಪ್ರೋತ್ಸಹ ಸಹಕಾರ ನೀಡುತ್ತಿದೆ ಎಂದು ಹೇಳಿದರು. ಎನ್.ನಾಗರಾಜು ರವರು ಮಾತನಾಡಿ ಮಕ್ಕಳಿಗೆ ಪಾಠದ ಜೊತೆಯಲ್ಲಿ ಆಟವು ಮುಖ್ಯ, ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕ್ರೀಡೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಬಾಂದವ ಸಂಸ್ಥೆ ಸಹಕಾರ, ಪ್ರೋತ್ಸಹ ನೀಡುತ್ತಿದೆ.

ಅಂತರಾಷ್ಟ್ರಿಯ ಕ್ರೀಡಾಕೂಟಗಳಲ್ಲಿ ನಮ್ಮ ನಾಡಿನ ಮಕ್ಕಳು ಭಾಗವಹಿಸಿ, ಪದಕಗಳಿಸಿ, ವಿಶ್ವಮಾನ್ಯರಾಗಿ ಬೆಳಗಬೇಕು ಎಂಬುದು ನಮ್ಮ ಆಶಯ. ಇದೇ ಸಂದರ್ಭದಲ್ಲಿ ಪ್ಯಾರ ಏಷಿಯಡ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ ರಕ್ಷಿತ್ ರಾಜುರವರಿಗೆ ಸನ್ಮಾನಿಸಲಾಯಿತು

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here