ದಿನಾಂಕ:18-08-2023 ರಂದು ಬಿ.ಇ.ಎಲ್ ಲೇಔಟ್ನ ವಿದ್ಯಾರಣ್ಯಪುರದ ವಾಸಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದ್ದು, ದೂರಿನಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಪಿರಾದುದಾರರ ವಾಟ್ಸ್ ಆಫ್ ನಂಬರ್ಗೆ ಚಾಟ್ ಮಾಡಿದ್ದು, ಚಾಟ್ನಲ್ಲಿ ವರ್ಕ್ ಪ್ಲಮ್ ಹೋಮ್ ಕೆಲಸ ನೀಡುತ್ತೇವೆಂದು ಮತ್ತು ದಿನಕ್ಕೆ ಕ 500/- ರಿಂದ # 10,000/- ರೂಪಾಯಿ ಹಣವನ್ನು ಗಳಿಸಬಹುದು ಎಂದು ನಂಬಿಸಿ ಅವಿಜೆವೊಡ್ಡಿ ಪಿರಾದುದಾರ ಅಕೌಂಟ್ನಿಂದ ಹಂತ ಹಂತವಾಗಿ ಒಟ್ಟು * 18,75,000/-(ಹದಿನೆಂಟು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿಗಳು) ಹಣವನ್ನು ವಿವಿಧ 12 ಬ್ಯಾಂಕ್ ಖಾತೆಗಳಿಗೆ ಆನ್ಲೈನ್ ಮುಖಾಂತರ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು ವಿವಿಧ ಬ್ಯಾಂಕ್ಗಳ ಅಕೌಂಟ್ಗಳಿಗೆ ಹಣವು ವರ್ಗಾವಣೆಯಾಗಿರುವ ಖಾತೆಗಳ ಖಾತೆದಾರರ ವಿವರಗಳನ್ನು ಸಂಪೂರ್ಣವಾಗಿ ಪಡೆದುಕೊಂಡು ನಂತರ ತನಿಖೆ ಮುಂದುವರೆಸಿ ಈ ಜಾಲದಲ್ಲಿ ತೊಡಗಿಸಿಕೊಂಡಿದ್ದ ಒಟ್ಟ || ವ್ಯಕ್ತಿಗಳ ಪೈಕಿ ಬೆಂಗಳೂರು ನಗರದ ಇಬ್ಬರನ್ನು ಹೊರರಾಜ್ಯಗಳಾದ ತೆಲಂಗಾಣದ ರಾಜ್ಯದ ಹೈದ್ರಾಬಾದ್ನ ವಾಸಿಗಳಾದ ಮೂರು ವ್ಯಕ್ತಿಗಳು ಮತ್ತು ಮಹಾರಾಷ್ಟ್ರದ ಮುಂಬೈನಲ್ಲಿರುವ ನಾಲ್ಕು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಇಬ್ಬರು ತಲೆಮರೆಸಿಕೊಂಡಿರುತ್ತಾರೆ, ಪತ್ತೆ
ಕಾರ್ಯ ಮುಂದುವರೆದಿದೆ.
ತನಿಖೆಯಿಂದ ತಿಳಿದುಬಂದ ಅಂಶವೇನೆಂದರೆ, ಈ ಪ್ರಕರಣದಂತೆಯೇ, ಭಾರತದಾದ್ಯಂತ ವಿವಿಧ 28 ರಾಜ್ಯಗಳಿಂದ ಒಟ್ಟು 2143 ಪ್ರಕರಣಗಳು ಎನ್.ಸಿ.ಆರ್.ಪಿ ಮೋರ್ಟಲ್ನಲ್ಲಿ ದಾಖಲಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿನ ವಿವಿಧ ಜಿಲ್ಲೆಗಳಿಂದ ಒಟ್ಟು 265 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನಗರದಲ್ಲಿ ವಿವಿಧ 14 ಪೊಲೀಸ್ ಠಾಣೆಗಳಿಂದ ಒಟ್ಟು 135 ಪ್ರಕರಣಗಳು ದಾಖಲಾಗಿರುತ್ತವೆ.
ಒಟ್ಟು 2143 ಪ್ರಕರಣಗಳಲ್ಲಿ ವಂಚಿಸಿದ್ದ ಹಣದ ಒಟ್ಟು ಮೌಲ್ಯ * 158,094159/-(ನೂರ ಐವತ್ತೇಂಟು ಕೋಟಿ ತೊಂಬತ್ತಾನಾಲ್ಕು ಲಕ್ಷದ ನೂರ ಐವತ್ತೊಂಬತ್ತು ರೂಪಾಯಿಗಳು) ಗಳಾಗಿರುತ್ತವೆ. ಸಾರ್ವಜನಿಕರಿಂದ ವಂಚಿಸಿದ್ದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ ಬ್ಯಾಂಕ್ ಖಾತೆಗಳ ಪೈಕಿ ಈಗಾಗಲೇ 30 ಬ್ಯಾಂಕ್ ಖಾತೆಗಳನ್ನು ಪೀಜ್ ಮಾಡಲಾಗಿದ್ದು, ಪೀಜ್ ಮಾಡಲಾಗಿರುವ ಮೊತ್ತವು 2 62,83,080/- (62 ಲಕ್ಷದ 33 ಸಾವಿರದ 80 ರೂಪಾಯಿಗಳು) ಆಗಿರುತ್ತದೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ವಿವಿಧ ಕಂಪನಿಯ | ಮೊಬೈಲ್ಗಳು 2 ಲ್ಯಾಪ್ ಟಾಪ್ಗಳು 15 ಸಿಮ್ ಕಾರ್ಡ್ಗಳು ಮತ್ತು 3 ಬ್ಯಾಂಕ್ ಚಿಕ್ ಬಂಕ್ಗಳು ಹಾಗೂ ಇತರೇ ದಾಖಲಾತಿಗಳನ್ನು ವಶಪಡೆಯಲಾಗಿದೆ. ತನಿಖೆ ಮುಂದುವರೆದಿದೆ.
ಈ ಕಾರ್ಯಚರಣೆಯನ್ನು ಉಪ ಪೊಲೀಸ್ ಆಯುಕ್ತರು (ಅಪರಾಧ-1) ಶ್ರೀ.ಅಬ್ದುಲ್ ಅಹದ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಸತ್ಯನಾರಾಯಣ ಸಿಂಗ್ ಮತ್ತು ಪೊಲೀಸ್
ಇನ್ಸ್ಪೆಕ್ಟರ್ ಹಜರೇಶ್ ಎ ಕಿಲೆದಾರ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯವರು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಸಾರ್ವಜನಿಕರಿಗೆ ವಾಟ್ಸಪ್ ಮತ್ತು ಟೆಲಿಗ್ರಾಮ್ ಆ್ಯಪ್ಗಳ ಮುಖಾಂತರ ‘ವರ್ಕ್ ಪ್ರಮ್ ಹೋಮ್’ ಕೆಲಸ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ಹಣವನ್ನು ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ ಅಂತರಾಜ್ಯ ಆರೋಪಿಗಳ ವಶ.
Stay Connected
Must Read






