HomeAnti Corruption Tvಮತ್ತೆ ಬೆಂಗಳೂರಿನಲ್ಲಿ ಚರ್ಚ್ ಮೇಲೆ ದಾಳಿ : ಸಂತ ಪಾಯಿಸ್ ಚರ್ಚ್ ಕಮ್ಮನಹಳ್ಳಿ

ಮತ್ತೆ ಬೆಂಗಳೂರಿನಲ್ಲಿ ಚರ್ಚ್ ಮೇಲೆ ದಾಳಿ : ಸಂತ ಪಾಯಿಸ್ ಚರ್ಚ್ ಕಮ್ಮನಹಳ್ಳಿ

- Advertisement -spot_img

ಬೆಂಗಳೂರು : ಬೆಂಗಳೂರು ಮಹದಾರ್ಮಕ್ಷೇತ್ರಕ್ಕೆ ಸೇರಿದ ಕಮ್ಮನಹಳ್ಳಿಯ ಸೇಂಟ್ ಪಾಯಿಸ್ ಚರ್ಚ್ ಅನ್ನು ಮುಂಜಾನೆ ದುಷ್ಕರ್ಮಿಯೊಬ್ಬ ಅಪವಿತ್ರಗೊಳಿಸಿದ್ದಾನೆ ನಂತರ ಅಕ್ಷಯ ಆಸ್ಪತ್ರೆಯ ಭದ್ರತಾ ಸಿಬ್ಬಂದಿಯಿಂದ ಮಾಹಿತಿ ಮೇರೆಗೆ ಕೆಲವು ಹೊರರಾಜ್ಯದ ಹಿಂದಿ ಹುಡುಗರನ್ನು ಪೊಲೀಸರಿಗೆ ವಿಚಾರಣೆ ಮಾಡಲು ಒಪ್ಪಿಸಲಾಯಿತು.


ಈ ದಿನ ಮುಂಜಾನೆ 3 ಗಂಟೆಗೆ ದಾಳಿಗೊಳಗಾದ ಕಮ್ಮನಹಳ್ಳಿಯ ಪಯಸ್ ಚರ್ಚ್‌ಗಾಗಿ ಪ್ರಾರ್ಥಿಸೋಣ. ಬಲಿಪೀಠ, ಬೈಬಲ್ ಮತ್ತು ಪವಿತ್ರ ಸ್ಮಾರಕವನ್ನು ನಾಶಪಡಿಸಲಾಯಿತು. ಅಕ್ಷಯ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪೊಲೀಸರು ಹಿಂದಿ ಮಾತನಾಡುವ ವ್ಯಕ್ತಿಯನ್ನು ಹಿಡಿದಿದ್ದಾರೆ. ಆರ್ಚ್‌ಬಿಷಪ್ ಪೀಟರ್ ಮಚಾಡೊ ಚರ್ಚ್‌ಗೆ ಭೇಟಿ ನೀಡಿದ್ದು, ತನಿಖೆ ನಡೆಯುತ್ತಿದೆ.

ಪೊಲೀಸ್ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕಿ ತನಿಖೆ ಪ್ರಾರಂಭ ಮಾಡಿದ್ದಾರೆ ಎಂಬ ಮಾಹಿತಿ ವರದಿಯಾಗಿದೆ.
ಈ ಧರ್ಮಕೇಂದ್ರದ ಗುರುಗಳು ಹಾಗೂ ಭಕ್ತಾದಿಗಳು ಕೂಡಲೇ ದುಷ್ಕರ್ಮಿಗಳನ್ನು ಹಿಡಿದು ಇದರ ಹಿಂದೆ ಯಾರು ಇದ್ದಾರೆ ಎಂಬ ಮಾಹಿತಿ ನೀಡಲೆಂದು ಪೊಲೀಸ್ರಲ್ಲಿ ಮನವಿ ಮಾಡಿಕೊಂಡರು.
ಇತ್ತೀಚಿಗೆ ಈ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕಾರ್ಯ ನಡೆಯುತ್ತಿದೆ ಆದಷ್ಟು ಬೇಗಾ ಇದು ಬದಲಾಗಬೇಕು ಎಂದು ಅಲ್ಲಿನ ಜನಗಳ ಅಭಿಪ್ರಾಯ.

ವರದಿ : ಆಂಟೋನಿ ಬೇಗೂರು

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here