ಬೆಂಗಳೂರು: ಇನ್ನೇನು ಚುನಾವಣಾ ದಿನಾಂಕ ಹತ್ತಿರ ಬರುತ್ತಿದ್ದಂತೆ,ಬೆಂಗಳೂರು ನಗರ ಮಡಿವಾಳದಲ್ಲಿ ತಡರಾತ್ರಿ ಬಿಜೆಪಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡಿ ಬಡಿ ರಾಜಕೀಯ. ತಡರಾತ್ರಿ ಬಿ ಟಿ ಎಂ ವಿಧಾನಸಭಾ ಕ್ಷೇತ್ರ ಬಿ ಜೆ ಪಿ. ಅಭ್ಯರ್ಥಿ ಶ್ರೀಧರ ರೆಡ್ಡಿ ಪರ ಪ್ರಚಾರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮುಖಂಡರ ಮೇಲೆ ಹಲ್ಲೆ ಆರೋಪ ಕೆಲವು ಬರುತ್ತದೆ. ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ ಹರಿನಾಥ್ ಆಸ್ಪತ್ರೆಗೆ ದಾಖಲಾಗಿದ್ದು ಸಂಸದ ತೇಜಸ್ವಿ ಸೂರ್ಯ ಖಂಡಿಸಿ ಮಾರಣಾಂತಿಕ ಹಲ್ಲೆ ಹಿನ್ನೆಲೆಯಲ್ಲಿ 307 ಕೇಸ್ ದಾಖಲಿಸಿ ಎಂದು ಹೇಳಿದರು.

ಬಿಟಿಎಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ಪರ ಹಣ ಹಂಚುತ್ತಿದ್ದ ವೇಳೆ ಬಿಜೆಪಿ ಮುಖಂಡ ಹರಿನಾಥ ಹಾಗೂ ಇತರರು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ ಹಾಗೂ ಪೊಲೀಸರು ಅವರ ವಿರೋಧ ಯಾವುದೇ ಪ್ರಕರಣ ದಾಖಲಿಸದೆ ಬಿಜೆಪಿ ನಾಯಕರ ಪರ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಇದನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಎಂದು ಬೆಳಗ್ಗೆ 10 ಗಂಟೆಗೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.







