ರಾಮನಗರ :ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ರಾಮನಗರ ಜಿಲ್ಲೆ ಮತ್ತು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ರಾಮನಗರ ಜಿಲ್ಲೆ ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿ ಅವೇರಹಳ್ಳಿ ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ ಗೌರವಾನ್ವಿತ ನ್ಯಾಯಾಧೀಶರಾದ ಅನಿತಾ ಮೇಡಂ ರವರು ಮತ್ತು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಜಿಲ್ಲಾಧ್ಯಕ್ಷರಾದ ಹೆಚ್ಚು ರಾಜೇಶ ರವರು ಉಪಸ್ಥಿತರಿದ್ದರು

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶಗಳು
- ಉಚಿತ ಕಾನೂನು ನೆರವು
- ಉಚಿತ ಕಾನೂನು ಸಲಹೆ
- ಜನತಾ ನ್ಯಾಯಾಲಯಗಳು (ಲೋಕ್ ಅದಾಲತ್ )
- ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಸಂಧಾನ ವ್ಯವಸ್ಥೆ
- ಪರ್ಯಾಯ ವ್ಯಾಜ್ಯ ಪರಿಹಾರದ ವ್ಯವಸ್ಥೆ
- ವ್ಯಾಜ್ಯ ಪೂರ್ವ ಸಮಸ್ಯೆಗಳ ಪರಿಹಾರ
- ಕಾಯಂ ಜನತಾ ನ್ಯಾಯಾಲಯ
- ಕಾನೂನು ಸುರಕ್ಷತೆ ಕಾರ್ಯಕ್ರಮಗಳು
- ಸಂತ್ರಸ್ತರ ಪರಿಹಾರ ಯೋಜನೆ
- ನ್ಯಾಯ ಸಂಯೋಗ( ಕಾನೂನು ನೆರವು ಘಟಕ ಒಂದೇ ಸೂರಿನಡಿಯಲ್ಲಿ )







