ಉಡುಪಿ : ಸಾರ್ವಜನಿಕರಿಗೆ ಉಚಿತ ಕಾನೂನು ಅರಿವು ನೀಡಲು ಹಾಗೂ ಉಚಿತ ಕಾನೂನು ಸೇವೆಗಳನ್ನು ನೀಡಲು ಕರ್ನಾಟಕದಂಥ ಅನೇಕ ಕಾನೂನು ಸೇವೆಗಳ ಕೇಂದ್ರ ಕಚೇರಿಗಳನ್ನು ತೆರೆದಿದ್ದಾರೆ . ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ,ಬೆಂಗಳೂರು . ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ,ಜಿಲ್ಲಾ ವಕೀಲರ ಸಂಘ( ರಿ ),ಕಂದಾಯ ಇಲಾಖೆ ಪಂಚಾಯತ್, ರಾಜ್ ಇಲಾಖೆ ,ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ,ಉಡುಪಿ ಜಿಲ್ಲೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ,ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ,ಕುಂಜಿಬೆಟ್ಟು ಇವರ ಜಂಟಿ ಆಶ್ರಯದಲ್ಲಿ . ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಬುಡಕಟ್ಟು ಜನರ ಹಕ್ಕು ಜಾರಿ ಮತ್ತು ಸಂರಕ್ಷ ಣೆ )ಯೋಜನೆ 2015ರ ಅನುಷ್ಠಾನ ಮತ್ತು ಕಾನೂನು ಸೇವೆಗಳ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ವನ್ನು ದಿನಾಂಕ 13-03-2022 ಶುಕ್ರವಾರ ಸಮಯ 10:30 am ಗಂಟೆಗೆ ಗ್ರಾಮ ಪಂಚಾಯತ್ ಆವರಣ ಚೇರ್ಕಾಡಿ ನಲ್ಲಿ ನಡೆಸಲಾಯಿತು .
ಈ ಕಾರ್ಯಕ್ರಮವನ್ನು ಶ್ರೀ .ಎಚ್ ಶಶಿಧರ ಶೆಟ್ಟಿ -ಗೌರವಾನ್ವಿತ ಸದಸ್ಯ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ,ಅವರು ಉದ್ಘಾಟಿಸಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರೇಖಾ ಎಸ್ ಭಟ್- ಮಾನ್ಯ ಅಧ್ಯಕ್ಷರು ಗ್ರಾಮ ಪಂಚಾಯತ್ ಚೇರ್ಕಾಡಿ , ವಹಿಸಿಕೊಂಡಿದ್ದರು . ಮುಖ್ಯ ಅತಿಥಿಗಳಾಗಿ ಡಾ॥ ಮೋಹನ್ ರಾವ್ ನಲ್ವಾಡೆ- ಮಾನ್ಯ ಸದಸ್ಯರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಹಾಗೂ ಅಧ್ಯಕ್ಷರು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ -ನವದೆಹಲಿ . ಪ್ರೊ (ಡಾ.) ನಿರ್ಮಲಾ ಕುಮಾರಿ -ಮಾನ್ಯ ಪ್ರಾಂಶುಪಾಲರು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಕುಂಜಿಬೆಟ್ಟು . ಶ್ರೀ. ಪಿ ನಾಗರಾಜ್ ಮಾನ್ಯ ಅಧ್ಯಕ್ಷರು ವಕೀಲ ಸಂಘ (ರಿ )ಉಡುಪಿ ಶ್ರೀ. ರಾಜಶೇಖರ್ ಮೂರ್ತಿ ಮಾನ್ಯ ತಹಸೀಲ್ದಾರರು ಬ್ರಹ್ಮಾವರ ತಾಲ್ಲೂಕು . ಶ್ರೀ. ದೂದ್ ಪೀರ್ ,ಕ .ಸ .ಸೇ ಮಾನ್ಯ ಯೋಜನಾ ಸಮನ್ವಯಾಧಿಕಾರಿಗಳು ,ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಉಡುಪಿ . ಇವರ ಎಲ್ಲರೂ ಈ ಯಶಸ್ವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .
ಶ್ರೀ .ಸುಭಾಷ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಚೇರ್ಕಾಡಿ ಮತ್ತು ಶ್ರೀಮತಿ ಶರ್ಮಿಳಾ ಎಸ್ . ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಅವರು ಕಾನೂನು ಸೇವೆಗಳ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಸ್ವಾಗತಿಸಿದರು .







