ಹೊಲದಲ್ಲಿ ಕೆಲಸ ಮಾಡಿ ಮಲಗಿದ್ದ ಮಹಿಳೆಯ ಮೇಲೆ 6 ಅಡಿ ಉದ್ದದ ನಾಗರಹಾವು ಹರಿದಾಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಲಬುರಿಗಿ ಜಿಲ್ಲೆಯ ಮಲ್ಲಾಬಾದ್‌ನ ಜಮೀನಿನಲ್ಲಿ ಮಲಗಿದ್ದ ಮಹಿಳೆಯ ಮೇಲೆ ನಾಗರ ಹಾವು ಹರಿದಾಡಿದೆ. ಎಚ್ಚರಗೊಂಡ ಆಕೆ ತನ್ನ ಮೇಲಿದ್ದ ಹಾವನ್ನು ಕಂಡು ಬೆಚ್ಚಿಬಿದ್ದಳು. ಅದು ಚಲನರಹಿತವಾಗಿ ಉಳಿಯಿತು. ಉಸಿರು ಬಿಗಿ ಹಿಡಿದು ಶ್ರೀಶೈಲ ಮಲ್ಲಿಕಾರ್ಜನ ದೇವರನ್ನು ಪ್ರಾರ್ಥಿಸಿದಳು ಕೆಲ ನಿಮಿಷಗಳ ಕಾಲ ತೀವ್ರ ಭಯದಿಂದ ಹಾವು ಕಚ್ಚುತ್ತದೋ.. ಇಲ್ಲ ಸದ್ದಿಲ್ಲದೆ ಹೋಗುತ್ತದೋ.. ನೋಡುತ್ತಿರುವ ಜನರಲ್ಲಿ ಒಂದೇ ಟೆನ್ಷನ್. ಅದೃಷ್ಟವಶಾತ್ ನಾಗರಹಾವು ಮಹಿಳೆಯ ಮೈಮೇಲಿಂದ ಇಳಿದು ಹೋಗಿದೆ.
ಹಾವು ತನ್ನಷ್ಟಕ್ಕೆ ತಾನಾಗೇ ಹೋಗುವವರೆಗೂ ಆ ಮಹಿಳೆ ಪಟ್ಟ ಟೆನ್ಷನ್ ಅಷ್ಟಿಷ್ಟಲ್ಲ ಮಲ್ಲಯ್ಯ ಸಾಮಿ.. ಕಾಪಾಡು ಸಾಮಿ ಶಿವ ಎಂದು ಹೇಳುತ್ತಲೇ ಇರುತ್ತಾರೆ. ಇದನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದಾಗ ಇದೆಲ್ಲ ಬೆಳಕಿಗೆ ಬಂದಿದೆ. ಈ ನಡುವೆ ಎರಡು ವರ್ಷಗಳ ಹಿಂದಿನ ಈ ವಿಡಿಯೋ ಮತ್ತೊಮ್ಮೆ ಟ್ರೆಂಡ್ ಆಗುತ್ತಿದೆ.






